Sunday, September 19, 2021
Homeಕ್ರಿಕೆಟ್ಬಾಂಗ್ಲಾದೇಶ ವಿರುದ್ಧ 60ಕ್ಕೆ ಆಲೌಟ್ ಆದ ನ್ಯೂಜಿಲ್ಯಾಂಡ್​

ಇದೀಗ ಬಂದ ಸುದ್ದಿ

ಬಾಂಗ್ಲಾದೇಶ ವಿರುದ್ಧ 60ಕ್ಕೆ ಆಲೌಟ್ ಆದ ನ್ಯೂಜಿಲ್ಯಾಂಡ್​

ಢಾಕಾ: ಆಸ್ಟ್ರೇಲಿಯಾ ವಿರುದ್ಧ 4-1ರಲ್ಲಿ ಟಿ20 ಸರಣಿ ಗೆದ್ದ ಹುಮ್ಮಸ್ಸಿನಲ್ಲಿರುವ ಬಾಂಗ್ಲಾದೇಶ ತಂಡ ಇದೀಗ ನ್ಯೂಜಿಲ್ಯಾಂಡ್ ವಿರುದ್ಧವೂ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಬುಧವಾರ ಆರಂಭವಾದ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡವನ್ನು ಕೇವಲ 60 ರನ್​ಗಳಿಗೆ ಆಲೌಟ್ ಮಾಡಿದೆ. ಇದು ನ್ಯೂಜಿಲ್ಯಾಂಡ್ ಟಿ20 ಚರಿತ್ರೆಯಲ್ಲೇ ದಾಖಲಾದ ಅತ್ಯಂತ ಕಡಿಮೆ ಮೊತ್ತವಾಗಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನ್ಯೂಜಿಲ್ಯಾಂಡ್​ ಆರಂಭದಿಂದಲೇ ಬಾಂಗ್ಲಾದೇಶ ಬೌಲರ್​ಗಳ ದಾಳಿಗೆ ತರಗೆಲೆಯಂತೆ ಉದುರಿಹೋದರು. ಕೇವಲ 16.5 ಓವರ್​ಗಳಲ್ಲಿ 60 ರನ್​ಗಳಿಗೆ ಕಿವೀಸ್ ಸರ್ವಪತನಗೊಂಡಿತು. ನಾಯಕ ಟಾಪ್ ಲಾಥಮ್ ಮತ್ತು ಹೆನ್ರಿ ನಿಕೋಲ್ಸ್​ ಮಾತ್ರ ತಲಾ 18 ರನ್​ಗಳಿಸಿ ತಂಡದಲ್ಲಿ ಎರಡಂಕಿ ಮೊತ್ತ ದಾಟಿದ ಬ್ಯಾಟ್ಸ್​ಮನ್​ಗಳಾದರು.

ಆರಂಭಿಕ ಬ್ಯಾಟ್ಸ್​ಮನ್ ಟಾಮ್ ಬ್ಲಂಡೆಲ್(2), ರಚಿನ್ ರವೀಂದ್ರ (0), ವಿಲ್ ಯಂಗ್(5), ಕಾಲಿನ್ ಡಿ ಗ್ರ್ಯಾಂಡ್​ಹೋಮ್​(1), ಕೋಲ್ ಮೆಕಾಂಚಿ(0) ಡಾಗ್ ಬ್ರೇಸ್​ವೆಲ್(5) ,ಅಜಾಜ್ ಪಟೇಲ್(3), ಜಾಕೋಬ್​ ಡಫ್ಫಿ(3) ಒಂದಂಕಿ ಮೊತ್ತಕ್ಕೆ ವಿಕೆಟ್​ ಒಪ್ಪಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img