Saturday, September 18, 2021
Homeಸುದ್ದಿ ಜಾಲಇಂದಿನಿಂದ ಹೊಸ ರೂಲ್ಸ್​​..?

ಇದೀಗ ಬಂದ ಸುದ್ದಿ

ಇಂದಿನಿಂದ ಹೊಸ ರೂಲ್ಸ್​​..?

ನವದೆಹಲಿ: ಹೊಸ ತಿಂಗಳು ಆರಂಭವಾಗುತ್ತಿದೆ. ಜೊತೆಗೆ ಹೊಸ ನಿಯಮ, ಹೊಸ ಬದಲಾವಣೆ ಸಹ ಈ ತಿಂಗಳಲ್ಲೇ ಆಗುತ್ತಿದೆ. ಈ ಬದಲಾವಣೆಗಳು ಸಾಮಾನ್ಯ ಜನರಿಗೂ ಅನ್ವಯವಾಗುತ್ತಿವೆ. ಸೆಪ್ಟೆಂಬರ್ 1ರಿಂದ ದೇಶದಲ್ಲಿ ಕೆಲ ಬದಲಾವಣೆಯಾಗುತ್ತಿದೆ.

ನಿಮ್ಮದೇನಾದರೂ ಪಂಜಾಬ್ ನ್ಯಾಷನಲ್ ಬ್ಯಾಂಕ್​ (ಪಿಎನ್​ಬಿ) ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದರೆ ಇತ್ತ ಗಮನಕೊಡಿ. ಸೆಪ್ಟೆಂಬರ್ 1ರಿಂದ ಉಳಿತಾಯ ಖಾತೆ ಮೇಲಿನ ಬಡ್ಡಿ ದರವನ್ನ ಬ್ಯಾಂಕ್ ಕಡಿತಗೊಳಿಸುತ್ತಿದೆ. ವಾರ್ಷಿಕ ಶೇ.0.10ರಷ್ಟು ಬಡ್ಡಿದರ ಕಡಿತಗೊಳಿಸಲು ಬ್ಯಾಂಕ್ ನಿರ್ಧರಿಸಿದ್ದು, ಶೇ.3ರಿಂದ 2.90ಕ್ಕೆ ಇಳಿಸಿದೆ.

ಜಿಎಸ್​​ಟಿ ಸಂಗ್ರಹದಲ್ಲಿ ಕುಸಿತ ಗಮನದಲ್ಲಿಟ್ಟುಕೊಂಡಿರುವ ಕೇಂದ್ರ ಸರ್ಕಾರ ವಿಳಂಬ ಪಾವತಿದಾರರ ಮೇಲೆ ಹದ್ದಿನ ಕಣ್ಣಿಡಲು ಸಿದ್ಧತೆ ನಡೆಸಿದೆ. ಒಂದು ವೇಳೆ ನಿಗದಿತ ಸಮಯದಲ್ಲಿ ಜಿಎಸ್​ಟಿ ಪಾವತಿಸದಿದ್ದರೆ ನಿವ್ವಳ ತೆರಿಗೆ ಮೇಲೆ ಬಡ್ಡಿ ವಿಧಿಸಲು ಕೇಂದ್ರ ನಿರ್ಧರಿಸಿದೆ. ಈ ನಿಯಮ ಸಹ ಸೆ.1ರಿಂದಲೇ ಜಾರಿಯಾಗುತ್ತಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಯಲ್ಲಿ ವಿಳಂಬವಾದರೆ, ಸೆಪ್ಟೆಂಬರ್ 1ರಿಂದ ಒಟ್ಟು ತೆರಿಗೆ ಮೇಲೆ ಬಡ್ಡಿ ವಿಧಿಸಲಾಗುವುದು ಎಂದು ಸರ್ಕಾರ ಹೇಳಿದೆ.

ನಾಗರಿಕರು ತಮ್ಮ ಪಾನ್​ ಕಾರ್ಡ್​​ ಅನ್ನು ಆಧಾರ್ ಜೊತೆ ಲಿಂಕ್ ಮಾಡುವ ಗಡುವನ್ನು ಸರ್ಕಾರ ಸೆಪ್ಟೆಂಬರ್ 30, 2021ರ ವರೆಗೆ ವಿಸ್ತರಿಸಿದೆ. ಈ ಮೊದಲು ಜೂನ್ 30, 2021ರ ಗಡುವು ನೀಡಲಾಗಿತ್ತು. ಬಳಿಕ ಈ ಸಮಯ ವಿಸ್ತರಿಸಿದ್ದು, ಇದೀಗ ಸೆಪ್ಟೆಂಬರ್ ಅಂತ್ಯಕ್ಕೆ ಗಡುವು ನೀಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img