Wednesday, September 22, 2021
Homeಕೋವಿಡ್-19ಆಗಸ್ಟ್‌ ತಿಂಗಳ ಲಸಿಕಾ ಗುರಿ ತಲುಪಿದ ಭಾರತ

ಇದೀಗ ಬಂದ ಸುದ್ದಿ

ಆಗಸ್ಟ್‌ ತಿಂಗಳ ಲಸಿಕಾ ಗುರಿ ತಲುಪಿದ ಭಾರತ

ದೇಶದಲ್ಲಿ ಆಗಸ್ಟ್‌ ತಿಂಗಳಿನಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಆಗಸ್ಟ್‌ ತಿಂಗಳಿನಲ್ಲಿ 15 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಗುರಿ ಹಾಕಿಕೊಂಡಿದ್ದು, ಈ ತಿಂಗಳು 18,38,14,912 ಮಂದಿಗೆ ಲಸಿಕೆ ನೀಡಲಾಗಿದೆ.

ಜೂನ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ 11.95 ಕೋಟಿ ಕೊರೊನಾ ಲಸಿಕೆ ಪ್ರಮಾಣ ಪೂರೈಸುವ ಭರವಸೆ ನೀಡಿತ್ತು. ಆದರೆ ಜೂನ್ ಅಂತ್ಯದಲ್ಲಿ ಈ ಗುರಿ ಸಾಧಿಸಲು ಸುಮಾರು 50 ಲಕ್ಷ ಅಂತರ ಉಂಟಾಗಿತ್ತು.

ಜುಲೈ ತಿಂಗಳಿನಲ್ಲಿ 13.50 ಕೋಟಿ ಲಸಿಕಾ ಗುರಿ ಹೊಂದಿತ್ತು. ಆದರೆ ಕೊನೆಗೆ 13,45,82,577 ಮಂದಿಗೆ ಕೊರೊನಾ ಲಸಿಕೆ ನೀಡಿ ಬಹುತೇಕ ಗುರಿ ಸಾಧಿಸಿತು. ಇದಾಗ್ಯೂ ಜುಲೈ ತಿಂಗಳಿನಲ್ಲಿ ಲಸಿಕಾ ವೇಗ 12.5% ಏರಿಕೆ ಕಂಡಿತ್ತು.

ಆಗಸ್ಟ್‌ ತಿಂಗಳಿನಲ್ಲಿ ಸುಮಾರು 15 ಕೋಟಿ ಲಸಿಕೆಗಳನ್ನು ನೀಡುವ ಗುರಿ ಹೊಂದಲಾಗಿತ್ತು. ಇದೀಗ ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಲಸಿಕೆ ನೀಡಲಾಗಿದೆ. ಈ ತಿಂಗಳಿನಲ್ಲಿ 18,38,14,912 ಮಂದಿಗೆ ಲಸಿಕೆ ನೀಡಿ ಗುರಿಯನ್ನು ತಲುಪಿದೆ. ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ನೀಡಲಾಗಿದೆ ಎಂದು ಕೇಂದ್ರ ತಿಳಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img