Sunday, September 19, 2021
Homeಕ್ರೈಂ ನ್ಯೂಸ್ನಡು ರಸ್ತೆಯಲ್ಲಿ ಚೂರಿ ಇರಿದ ಪ್ರೇಮಿ

ಇದೀಗ ಬಂದ ಸುದ್ದಿ

ನಡು ರಸ್ತೆಯಲ್ಲಿ ಚೂರಿ ಇರಿದ ಪ್ರೇಮಿ

ಅಷ್ಟಮಿಯ ಸಂಭ್ರಮದಲ್ಲಿದ್ದ ಉಡುಪಿಯ ಜನರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು. ಉಡುಪಿಯ ಸಂತೆಕಟ್ಟೆಯ ರೊಬೊ ಸ್ಟಾಪ್ ಬಳಿ ಯುವತಿಯನ್ನು ತಡೆದ ಯುವಕ ಮಾತನಾಡುತ್ತಾ ಆಕೆಯ ಕಿಬ್ಬೊಟ್ಟೆಗೆ ಚೂರಿಯಿಂದ ಇರಿದು ಬಿಟ್ಟ. ಆಸ್ಪತ್ರೆಗೆ ದಾಖಲು ಮಾಡಲಾಗಿದ್ದ ಯುವಕ ಮತ್ತು ಯುವತಿ ಮೃತಪಟ್ಟಿದ್ದಾರೆ.

ಯುವತಿಗೆ ಚಾಕು ಇರಿದಿದ್ದ ಪಾಗಲ್ ಪ್ರೇಮಿ ಯುವತಿ ಕೆಳಗೆ ಬೀಳುತ್ತಿದ್ದಂತೆಯೇ ತನ್ನ ಕತ್ತನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಇಬ್ಬರೂ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಜನ ಮಾತ್ರ ಅವರ ಸುತ್ತ ನಿಂತುಕೊಂಡು ಯಾರ ಸರಿ ತಪ್ಪು ಎಂದು ಲೆಕ್ಕ ಹಾಕುತ್ತಿದ್ದರು.

ಇಬ್ಬರ ದೇಹದಿಂದ ಸಾಕಷ್ಟು ರಕ್ತ ಸೋರಿಕೆಯಾಗಿ, ಮಳೆ ನೀರಿನಲ್ಲಿ ಸೇರಿಕೊಂಡು ಹರಿದು ಹೋಯಿತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ವಿಳಂಬವಾಗಿ ಯುವತಿ ಸಾವನ್ನಪ್ಪಿದರೆ, ಯುವಕನ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾನೆ.

ಈ ಅಮಾನವೀಯ ಘಟನೆ ನಡೆದಿರೋದು ಆಗಸ್ಟ್ 30ರ ಸಂಜೆ 6 ಗಂಟೆಯ ಅಸುಪಾಸಿನಲ್ಲಿ. ಉಡುಪಿಯ ಸಂತೆಕಟ್ಟೆಯ ರಾಷ್ಟ್ರೀಯ ಬ್ಯಾಂಕ್ ವೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿರುವ, ಅಂಬಾಗಿಲು ನಿವಾಸಿ ಸೌಮ್ಯಶ್ರೀಗೆ ಪಾಗಲ್ ಪ್ರೇಮಿ ರಾಂಪುರ ನಿವಾಸಿ ಸಂದೇಶ್ ಕುಲಾಲ್ ಚಾಕು ಹಾಕಿದ್ದಾನೆ. ಬಳಿಕ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾನೆ.

ಯುವತಿ ಸೌಮ್ಯಶ್ರೀ ಆಗಸ್ಟ್ 30ರ ಸಂಜೆ ಬ್ಯಾಂಕಿನಲ್ಲಿ ಕೆಲಸ ಮುಗಿಸಿ ಸ್ಕೂಟಿಯಲ್ಲಿ ಮನೆಗೆ ಹಿಂತಿರುಗಿ ಹೊಗುತ್ತಿದ್ದ ವೇಳೆ, ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿ ಪಾಗಲ್ ಪ್ರೇಮಿ ಸಂದೇಶ್ ಕುಲಾಲ್ ತಡೆದಿದ್ದಾನೆ. ಮಾಹಿತಿಯ ಪ್ರಕಾರ ಇವರಿಬ್ಬರೂ 7 ವರ್ಷದಿಂದ ಪ್ರೀತಿಸುತ್ತಿದ್ದು, ಇತ್ತೀಚೆಗೆ ಯುವತಿ ಬೇರೊಬ್ಬನ ಜೊತೆ ನಿಶ್ಚಿತಾರ್ಥ ನಡೆದಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img