Sunday, September 19, 2021
Homeಕ್ರಿಕೆಟ್ಕ್ರೀಡೆಪ್ಯಾರಾಲಿಂಪಿಕ್ಸ್‌: ಭಾರತಕ್ಕೆ ಮತ್ತೊಂದು ಚಿನ್ನ ತಂದ ಸುಮಿತ್‌ ಆಂಟಿಲ್

ಇದೀಗ ಬಂದ ಸುದ್ದಿ

ಪ್ಯಾರಾಲಿಂಪಿಕ್ಸ್‌: ಭಾರತಕ್ಕೆ ಮತ್ತೊಂದು ಚಿನ್ನ ತಂದ ಸುಮಿತ್‌ ಆಂಟಿಲ್

ಟೋಕಿಯೊ: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಲಭಿಸಿದೆ. ಪುರುಷರ ಜಾವೆಲಿನ್‌ (ಎಫ್‌64) ಎಸೆತ ಪಂದ್ಯದಲ್ಲಿ ಭಾರತದ ಸುಮಿತ್‌ ಆಂಟಿಲ್‌ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ಸುಮಿತ್‌, 68.55 ಮೀಟರ್‌ ಜಾವೆಲಿನ್‌ ಎಸೆದು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ.

ಭಾರತದ ಮತ್ತೊಬ್ಬ ಜಾವೆಲಿನ್‌ ಕ್ರೀಡಾಪಟು ಸಂದೀಪ್‌ ಚೌದರಿ 62.20 ಮೀಟರ್‌ ಜಾವೆಲಿನ್‌ ಎಸೆದು ನಾಲ್ಕನೇ ಸ್ಥಾನ ಪಡೆದರು.

ಆಸ್ಟ್ರೇಲಿಯಾದ ಮಿಚೆಲ್‌ ಬುರಿಯಾನ್‌ (66.29 ಮೀ.) ಬೆಳ್ಳಿ ಪದಕ ಹಾಗೂ ಶ್ರೀಲಂಕಾದ ದುಲನ್‌ ಕೊಡಿಥುವಕ್ಕ (66.29 ಮೀ.) ಕಂಚಿನ ಪದಕ ಗೆದ್ದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img