Sunday, September 19, 2021
Homeರಾಜಕೀಯನಾಳೆ ಸಿಎಂ ಸಭೆ ಬಳಿಕ ಶಾಲಾರಂಭ ಬಗ್ಗೆ ನಿರ್ಧಾರ: ಸಚಿವ ಬಿ.ಸಿ.ನಾಗೇಶ್

ಇದೀಗ ಬಂದ ಸುದ್ದಿ

ನಾಳೆ ಸಿಎಂ ಸಭೆ ಬಳಿಕ ಶಾಲಾರಂಭ ಬಗ್ಗೆ ನಿರ್ಧಾರ: ಸಚಿವ ಬಿ.ಸಿ.ನಾಗೇಶ್

ಚಿಕ್ಕಮಗಳೂರು: ನಾಳೆ ಸಿಎಂ ತಜ್ಞರ ಜೊತೆ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿ ತೆಗೆದುಕೊಳ್ಳುವ ನಿರ್ಣಯಕ್ಕೆ ಶಿಕ್ಷಣ ಇಲಾಖೆ ಬದ್ಧವಾಗಿದೆ. ತಜ್ಞರು ಹಸಿರು ನಿಶಾನೆ ತೋರಿದ್ರೆ ಶಾಲೆ ಆರಂಭಿಸಲು ಇಲಾಖೆ ಸಂಪೂರ್ಣ ತಯಾರಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 9 ರಿಂದ 12 ರವರೆಗೆ ಶಾಲೆ ಪ್ರಾರಂಭವಾದ ನಂತರ ಪೋಷಕರು ಹಾಗೂ ಮಕ್ಕಳಲ್ಲಿ ಉತ್ಸಾಹ ಕಂಡುಬರುತ್ತಿದೆ. ಅನೇಕ ಶಾಲೆಗಳಿಗೆ ಭೇಟಿ ನೀಡಿದ ವೇಳೆ ಬಹುತೇಕ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ತೆರೆಯುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

ಇನ್ನು 6 ರಿಂದ 8 ನಂತರ ಒಂದನೇ ತರಗತಿಯಿಂದ 5 ನೇ ತರಗತಿಗಳನ್ನು ಆರಂಭ ವಿಚಾರದಲ್ಲಿ ತಜ್ಞರ ಅಭಿಪ್ರಾಯ ಮುಖ್ಯ. ಮಹಾಮಾರಿ ಕೊರೊನಾ ಕಾರಣದಿಂದ ಸಿಎಂ ತಜ್ಞರ ಜೊತೆ ನಿರ್ಣಯ ತೆಗೆದುಕೊಳ್ಳಲಿದ್ದಾರೆ. ನಾಳೆ ಸಿಎಂ ನೇತೃತ್ವದಲ್ಲಿ ತಜ್ಞರ ಅಭಿಪ್ರಾಯ ಬಂದ ಮೇಲೆ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಮೈಸೂರು ಗ್ಯಾಂಗ್ ರೇಪ್​ ಕೇಸ್​​​ ಬಗ್ಗೆ ಮಾತನಾಡಿ, ಅತ್ಯಾಚಾರ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಭಾರತದಲ್ಲಿ ಹೆಣ್ಣು ಮಕ್ಕಳನ್ನು ಪೂಜನೀಯ ಭಾವನೆಯಲ್ಲಿ ನೋಡಲಾಗುತ್ತದೆ. ದುಷ್ಕರ್ಮಿಗಳು ಹೆಣ್ಣನ್ನು ಭೋಗದ ವಸ್ತುವನ್ನಾಗಿ ನೋಡಿ ಹೀನಕೃತ್ಯ ಎಸಗಿದ್ದಾರೆ. ಆ ಯುವಕರ ಕೃತ್ಯವನ್ನು ಸಮಾಜ ವಿರೋಧಿಸುವುದು ಸರ್ವೇ ಸಾಮಾನ್ಯ. ಪ್ರಜಾಪ್ರಭುತ್ವ ದೇಶದಲ್ಲಿ ಹೆದರಿಕೆ ಬರುವಂತಹ ಕಠಿಣ ನಿರ್ಣಯಗಳು ಬರಬೇಕು. ಮೌಲ್ಯಾಧಾರಿತ ಶಿಕ್ಷಣ ಒಂದೇ ಇವುಗಳನ್ನು ತಡೆಯಲು ಇರುವ ಮಾರ್ಗ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img