Sunday, September 19, 2021
Homeಸುದ್ದಿ ಜಾಲದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಇದೀಗ ಬಂದ ಸುದ್ದಿ

ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ದೇಶಾದ್ಯಂತ ಇಂದು ಸೋಮವಾರ ಶ್ರೀ ಕೃಷ್ಣ ಪರಮಾತ್ಮನ ಹುಟ್ಟಿದ ದಿನವನ್ನು ಶ್ರದ್ಧಾ, ಭಕ್ತಿ, ಸಂಭ್ರಮ-ವಿನೋದಗಳಿಂದ ಭಕ್ತರು ಆಚರಿಸುತ್ತಿದ್ದಾರೆ. ಮನೆಗಳಲ್ಲಿ ಬೆಳಗ್ಗೆಯಿಂದಲೇ ಮನೆಯನ್ನು ಸಾರಿಸಿ ತಳಿರು ತೋರಣಗಳನ್ನು, ಹೂವಿನ ಹಾರಗಳನ್ನು ದೇವರ ಮುಂದೆ ಮನೆ ಬಾಗಿಲಿಗೆ ಹಾಕಿ ರಂಗೋಲಿ ರಚಿಸಿ ಹೆಂಗಳೆಯರು ಸ್ನಾನ ಮಾಡಿ ಹೊಸ ಉಡುಪು ತೊಟ್ಟು ಸಂಭ್ರಮಿಸುತ್ತಿದ್ದಾರೆ.

ಶ್ರೀಕೃಷ್ಣನಿಗೆ ಪ್ರಿಯವಾದ ಲಡ್ಡು, ಕಜ್ಜಾಯ, ಅವಲಕ್ಕಿ, ಚಕ್ಕುಲಿ, ಕೃಷ್ಣ ಜನ್ಮಾಷ್ಠಮಿ ಸಿಹಿ ಉಂಡೆ ಮಾಡಿ ದೇವರಿಗೆ ನೈವೇದ್ಯ ಮಾಡಿ ಮನೆಯವರೆಲ್ಲರೂ ಖುಷಿಯಿಂದ ಸೇರಿ, ನಂಟರಿಷ್ಠರು, ಬಂಧು-ಬಳಗವನ್ನು ಕರೆದು ಹಬ್ಬದಡುಗೆ ಸಂಭ್ರಮವನ್ನು ಉಣಬಡಿಸಿ ತಾವು ಕೂಡ ತಿಂದು ಖುಷಿಪಡುತ್ತಾರೆ.

ಮಕ್ಕಳಿಗೆ ಕೃಷ್ಣನಂತೆ ವೇಷ ತೊಡಿಸಿ ಅವರ ಆಟ-ವಿನೋಗಳನ್ನು ನೋಡುತ್ತಿದ್ದಾರೆ. ಈ ಶುಭ ಸಂದರ್ಭವು ಭಗವಾನ್ ಶ್ರೀಕೃಷ್ಣನ ಪವಾಡಗಳನ್ನು ನೆನಪಿಸುತ್ತದೆ, ರಕ್ಷಣೆ, ಕರುಣೆ ಮತ್ತು ಪ್ರೀತಿಯ ದೇವರೆಂದು ಹೆಸರಾಗಿರುವ ಶ್ರೀ ಕೃಷ್ಣನ ಹುಟ್ಟು, ಬಾಲ್ಯ, ಪವಾಡಗಳನ್ನು ಕೇಳುವುದೇ ಚೆಂದ.

ಮಥುರ, ಇಸ್ಕಾನ್ ದೇವಾಲಯ ಸೇರಿದಂತೆ ಶ್ರೀಕೃಷ್ಣನ ದೇವಾಲಯಗಳಲ್ಲಿ ಇಂದು ಮುಂಜಾನೆಯಿಂದ ರಾತ್ರಿಯವರೆಗೆ ಹಲವು ವಿಶೇಷ ಕಾರ್ಯಕ್ರಮಗಳು, ಪೂಜೆ ಪುನಸ್ಕಾರಗಳು ನೆರವೇರುತ್ತಿವೆ.

ದೇಶದ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಗಣ್ಯರು, ಸೆಲೆಬ್ರಿಟಿಗಳು ದೇಶವಾಸಿಗಳಿಗೆ ಶ್ರೀಕೃಷ್ಣ ಜನ್ಮಾಷ್ಟಮಿಗೆ ಶುಭ ಕೋರಿದ್ದಾರೆ. ಕೋವಿಡ್ ನಿಯಮ, ನಿರ್ಬಂಧನೆಗಳ ನಡುವೆ ಸರಳವಾಗಿ ಈ ವರ್ಷ ಹಬ್ಬವನ್ನು ಆಚರಿಸಲಾಗುತ್ತಿದ್ದು, ಪ್ರಮುಖ ದೇವಾಲಯಗಳು ಆನ್ ಲೈನ್ ನಲ್ಲಿ ಭಕ್ತರಿಗೆ ದೇವರ ದರ್ಶನದ ವ್ಯವಸ್ಥೆ ಮಾಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img