Sunday, September 19, 2021
Homeರಾಜಕೀಯರಾಮನಗರದವರೆಗೂ ಮೆಟ್ರೋ ವಿಸ್ತರಣೆ: ಸಿಎಂ ಘೋಷಣೆ

ಇದೀಗ ಬಂದ ಸುದ್ದಿ

ರಾಮನಗರದವರೆಗೂ ಮೆಟ್ರೋ ವಿಸ್ತರಣೆ: ಸಿಎಂ ಘೋಷಣೆ

ಬೆಂಗಳೂರು: ಮುಂದಿನ ದಿನಗಳಲ್ಲಿ ರಾಮನಗರದವರೆಗೂ ಮೆಟ್ರೋ ವಿಸ್ತರಣೆ ಬಗ್ಗೆ ಚಿಂತನೆ ಇದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ನಾಯಂಡಹಳ್ಳಿ – ಕೆಂಗೇರಿ ನಡುವಿನ ಮೆಟ್ರೋ ಮಾರ್ಗ ವಿಸ್ತರಿಸಿ ಮಾತನಾಡಿದ ಸಿಎಂ, ಭವಿಷ್ಯದಲ್ಲಿ ರಾಮನಗರ, ರಾಜಾನುಕುಂಟೆ, ಮಾಗಡಿವರೆಗೂ ಮೆಟ್ರೋ ವಿಸ್ತರಿಸುವ ಗುರಿಯಿದೆ. ಜನಸಂದಣಿ ಪ್ರದೇಶದಲ್ಲಿ ಮೆಟ್ರೋ ಅಗತ್ಯವಿದೆ ಎಂದರು.

ದೇಶ – ವಿದೇಶದಿಂದ ಬರುವವರಿಗೆ ಉತ್ತಮ ಸಾರಿಗೆ ಬೇಕು. ಅದನ್ನು ನಮ್ಮ ಮೆಟ್ರೋ ಪೂರೈಸುತ್ತದೆ. ಏರ್ ಪೋರ್ಟ್ ಗೆ ಸಂಪರ್ಕ ಕಲ್ಪಿಸಲು ಹೈ ಸ್ಪೀಡ್ ರೈಲು, ಸಬ್ ಅರ್ಬನ್ ಹಾಗೂ ಮೆಟ್ರೋ ರೈಲು ಮಾರ್ಗದ ವ್ಯವಸ್ಥೆ ಮಾಡಿದ್ದೇವೆ. ಟ್ರಾಫಿಕ್ ಇರುವೆಡೆಗಳಲ್ಲಿ ಆಟೋಮ್ಯಾಟಿಕ್ ಸಿಗ್ನಲ್ ವ್ಯವಸ್ಥೆ, ಮುಖ್ಯ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಟ್ರಾಫಿಕ್ ಫ್ರೀ ರೂಡ್ ಮಾಡಲು ಚಾಲನೆ ದೊರೆತಿದೆ. ಬೇರಾವ ನಗರಗಳಲ್ಲಿಯೂ ಇಂತಹ ವ್ಯವಸ್ಥೆಗಳಿಲ್ಲ ಎಂದು ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img