Wednesday, September 22, 2021
Homeಕ್ರೈಂ ನ್ಯೂಸ್ಅಶ್ಲೀಲ ವಿಡಿಯೋ ಹರಿಬಿಟ್ಟು ಡೈವೋರ್ಸ್ ನೀಡಿದ ಗಂಡ

ಇದೀಗ ಬಂದ ಸುದ್ದಿ

ಅಶ್ಲೀಲ ವಿಡಿಯೋ ಹರಿಬಿಟ್ಟು ಡೈವೋರ್ಸ್ ನೀಡಿದ ಗಂಡ

ಮುಜಾಫರ್ ನಗರ್: ಪತ್ನಿಗೆ ತಲಾಖ್ ನೀಡಿದ ಪತಿರಾಯ ಆಕೆಯ ಅಶ್ಲೀಲ ವೀಡಿಯೋ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಹರಿಬಿಟ್ಟಿದ್ದಾನೆ. ಇದರಿಂದ ಮನನೊಂದ 25 ವರ್ಷದ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮುಜಾಫರ್ ನಗರ ಜಿಲ್ಲೆಯ ಕೃಷ್ಣನಗರದಲ್ಲಿ ಘಟನೆ ನಡೆದಿದೆ. ನಾಲ್ಕು ವರ್ಷಗಳ ಹಿಂದೆ ದಂಪತಿ ಮದುವೆಯಾಗಿದ್ದು, 18 ತಿಂಗಳ ಮಗುವಿದೆ. ಗಂಡ ಮೂರು ತಿಂಗಳ ಹಿಂದೆ ತ್ರಿವಳಿ ತಲಾಖ್ ಮೂಲಕ ಡೈವೋರ್ಸ್ ಕೊಟ್ಟಿದ್ದಾನೆ. ಡೈವೋರ್ಸ್ ನೀಡಿದ ನಂತರವೂ ಪತ್ನಿಗೆ ಕಿರುಕುಳ ನೀಡುತ್ತಿದ್ದ ಆರೋಪಿ ಆಕೆಯ ಅಶ್ಲೀಲ ವಿಡಿಯೋವನ್ನು ಫೇಸ್ಬುಕ್ ನಲ್ಲಿ ಹರಿಬಿಟ್ಟಿದ್ದ. ಇದರಿಂದ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಆಫೀಸರ್ ದೀಪಕ್ ಚತುರ್ವೇದಿ ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img