Sunday, September 19, 2021
Homeಕ್ರೈಂ ನ್ಯೂಸ್ಅಸ್ಸಾಂನಲ್ಲಿ ಏಳು ಟ್ರಕ್ ಗಳ ಮೇಲೆ ಶಂಕಿತ ಉಗ್ರರಿಂದ ಗುಂಡಿನ ದಾಳಿ

ಇದೀಗ ಬಂದ ಸುದ್ದಿ

ಅಸ್ಸಾಂನಲ್ಲಿ ಏಳು ಟ್ರಕ್ ಗಳ ಮೇಲೆ ಶಂಕಿತ ಉಗ್ರರಿಂದ ಗುಂಡಿನ ದಾಳಿ

ಅಸ್ಸಾಂ : ಅಸ್ಸಾಂನ ದಿಮಾ ಹಸಾವೊ ( Dima Hasao)ಜಿಲ್ಲೆಯಲ್ಲಿ ಗುರುವಾರ ರಾತ್ರಿ ಶಂಕಿತ ಉಗ್ರರು ( suspected militants ) ಏಳು ಟ್ರಕ್ ಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿ ನಂತರ ಬೆಂಕಿ ಹಚ್ಚಿದ ಪರಿಣಾಮ ಐವರು ಜನರು ಮೃತಪಟ್ಟು, ಒಬ್ಬರು ಗಾಯಗೊಂಡಿದ್ದಾರೆ.

ರಾತ್ರಿ 8.30 ರ ಸುಮಾರಿಗೆ ಶಸ್ತ್ರಸಜ್ಜಿತ ಜನರ ಗುಂಪು ಸಿಮೆಂಟ್ ಸಾಗಿಸುತ್ತಿದ್ದ ಆರು ಮತ್ತು ಕಲ್ಲಿದ್ದಲು ತುಂಬಿದ ಟ್ರಕ್ ಗಳನ್ನು ನಿಲ್ಲಿಸಿ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಲು (firing indiscriminately.) ಪ್ರಾರಂಭಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

‘ಗುಂಪು ಹಲವಾರು ನಿಮಿಷಗಳ ಕಾಲ ವಾಹನಗಳ ಮೇಲೆ ಗುಂಡು ಹಾರಿಸಿ ನಂತರ ಅವರಿಗೆ ಬೆಂಕಿ ಹಚ್ಚಿತು. ಘಟನೆಯಲ್ಲಿ ಐದು ಜನರು ಮೃತಪಟ್ಟಿದ್ದು, ಒಬ್ಬರಿಗೆ ಗಾಯವಾಗಿದೆ. ಅವರೆಲ್ಲರೂ ಟ್ರಕ್ ಗಳ ಚಾಲಕರು ಮತ್ತು ಹ್ಯಾಂಡಿಮ್ಯಾನ್ ಗಳು’ (handymen ) ಎಂದು ದಿಮಾ ಹಸಾವೊ ದ ಪೊಲೀಸ್ ಅಧೀಕ್ಷಕ ಜಯಂತ್ ಸಿಂಗ್ ಹೇಳಿದರು.

ಈ ದಾಳಿಯಲ್ಲಿ ದಿಮಾಸಾ ರಾಷ್ಟ್ರೀಯ ವಿಮೋಚನಾ ಸೇನೆ (DNLA) ಭಾಗಿಯಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಡಿಎನ್ ಎಲ್ ಎ ಯ ಸುಲಿಗೆ ಬೇಡಿಕೆಗಳಿಗೆ ಮಣಿಯಲು ಸಿಮೆಂಟ್ ಕಾರ್ಖಾನೆ (cement factory) ನಿರಾಕರಿಸಿದ್ದು ಅದಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img