Wednesday, September 22, 2021
Homeರಾಜಕೀಯದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭೇಟಿಯಾದ ನಟ ಸೋನು ಸೂದ್

ಇದೀಗ ಬಂದ ಸುದ್ದಿ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭೇಟಿಯಾದ ನಟ ಸೋನು ಸೂದ್

ನವದೆಹಲಿ : ಬಾಲಿವುಡ್ ನಟ ಸೋನು ಸೂದ್​ ದೆಹಲಿ ಸಿಎಂ ಕೇಜ್ರಿವಾಲ್ ಅವರನ್ನ ಭೇಟಿಯಾಗಿದ್ದಾರೆ. ಸಿಎಂ ನಿವಾಸದಲ್ಲಿ ಕೇಜ್ರಿವಾಲ್‌ರನ್ನ ಭೇಟಿಯಾಗಿದ್ದು, ಈ ವೇಳೆ ಡಿಸಿಎಂ ಮನೀಶ್​​​​ ಸಿಸೋಡಿಯಾ ಸಹ ಉಪಸ್ಥಿತರಿದ್ದರು.

ಕೊರೊನಾದಿಂದ ಹೇರಲಾಗಿದ್ದ ಲಾಕ್​​ಡೌನ್ ವೇಳೆ ಸೋನು ಸೂದ್​​​​ ವಲಸಿಗರು ತಮ್ಮ ನೆಲೆಗಳಿಗೆ ಸೇರಲು ನೆರವಾಗಿದ್ದರು. ಯಾವುದೇ ಫಲಾಪೇಕ್ಷೆಯಿಲ್ಲದೆ ಕಾರ್ಮಿಕರಿಗೆ ನೆರವಾಗಿದ್ದರು. ಆದ್ರೆ, ಸೋನು ಸೂದ್ ಈ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇಷ್ಟಾದರೂ ಈ ಭೇಟಿಯಲ್ಲಿ ಯಾವುದೇ ರಾಜಕೀಯ ಕಾರಣವಿಲ್ಲ ಎಂದು ಸೋನು ಸೂದ್ ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ ಆರಂಭವಾಗಲಿರುವ ನೂತನ ಯೋಜನೆಗೆ ಸೋನು ಸೂದ್ ರಾಯಭಾರಿಯಾಗಿ ನೇಮಿಸಲು ಸಿಎಂ ಕೇಜ್ರಿವಾಲ್ ನಿರ್ಧರಿಸಿದ್ದಾರೆ. ‘ದೇಶ್​​​​ ಕೆ ಮೆಂಟರ್​​​’ ಎಂಬ ಅಭಿಯಾನಕ್ಕೆ ಸೋನು ಸೂದ್‌ರನ್ನ ರಾಯಭಾರಿಯಾಗಿ ನೇಮಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ. ಈ ಮನವಿಗೆ ಸೋನು ಒಪ್ಪಿಕೊಂಡಿದ್ದಾರೆ.

‘ದೇಶ್​​​​ ಕೆ ಮೆಂಟರ್​​​’ ಎಂಬುದು ಸರ್ಕಾರಿ ಶಾಲೆ ಉಳಿಸಲು ಆರಂಭಿಸಲಾದ ಅಭಿಯಾನವಾಗಿದೆ. ವಿದ್ಯಾರ್ಥಿಗಳಿಗೆ ಸಲಹೆ ನೀಡಲು ಈ ಅಭಿಯಾನ ನೆರವಾಗಲಿದೆ. ಇನ್ನೊಂದೆಡೆ ಮುಂಬರುವ ಪಂಜಾಬ್​​​ ಚುನಾವಣೆ ದೃಷ್ಟಿಯಿಂದ ಸೋನು ಸೂದ್ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಸೋನು ಸೂದ್ ಅವರ ಸಹೋದರಿ ರಾಜಕೀಯ ಎಂಟ್ರಿ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img