Sunday, September 19, 2021
Homeಕ್ರಿಕೆಟ್ಕ್ರೀಡೆಟೋಕಿಯೋ ಒಲಿಂಪಿಕ್ಸ್​​: ಸೆಮಿಫೈನಲ್​ನಲ್ಲಿ ಪಿ.ವಿ. ಸಿಂಧುಗೆ ಸೋಲು

ಇದೀಗ ಬಂದ ಸುದ್ದಿ

ಟೋಕಿಯೋ ಒಲಿಂಪಿಕ್ಸ್​​: ಸೆಮಿಫೈನಲ್​ನಲ್ಲಿ ಪಿ.ವಿ. ಸಿಂಧುಗೆ ಸೋಲು

ಟೋಕಿಯೋ: ಭಾರತದ ಭರವಸೆಯ ಬ್ಯಾಡ್ಮಿಂಟನ್​ ಸ್ಟಾರ್​ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್​​ನ ಸೆಮಿಫೈನಲ್​ನಲ್ಲಿ ಸೋಲು ಕಂಡಿದ್ದಾರೆ. ವಿಶ್ವದ ನಂಬರ್ ಒನ್ ಮಹಿಳಾ ಬ್ಯಾಡ್ಮಿಂಟನ್ ತಾರೆ ತೈ ಜು ಯಿಂಗ್​ ವಿರುದ್ಧ ನಡೆದ ಪಂದ್ಯದಲ್ಲಿ 18-21 ಹಾಗೂ 12-21 ಸೆಟ್​ಗಳ ಅಂತರದಿಂದ ನಿರಾಸೆ ಅನುಭವಿಸಿದರು. ಸೆಮಿಫೈನಲ್​ನಲ್ಲಿ ಸೋಲು ಕಂಡಿರುವ ಕಾರಣ ಇದೀಗ ಪಿವಿ ಸಿಂಧು ಕಂಚಿನ ಪದಕಕ್ಕಾಗಿ ಚೀನಾದ ಆಟಗಾರ್ತಿ ವಿರುದ್ಧ ಹೋರಾಟ ನಡೆಸಲಿದ್ದಾರೆ.

ಇಂದಿನ ಸೆಮಿಫೈನಲ್​ ಸೋಲಿನಿಂದ ಸಿಂಧು ಚಿನ್ನದ ಪದಕ ಗೆಲುವ ಕನಸು ಭಗ್ನಗೊಂಡಿದ್ದು, ಫೈನಲ್​ ರೇಸ್​ನಿಂದ ಹೊರಬಿದ್ದಿದ್ದಾರೆ.ಈ ಹಿಂದೆ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ 21-13, 22-20 ಅಂತರದಿಂದ ಗೆಲುವು ದಾಖಲು ಮಾಡಿ ಸೆಮಿಫೈನಲ್​ಗೆ ಲಗ್ಗೆ ಹಾಕಿದ್ದ ಬ್ಯಾಡ್ಮಿಂಟನ್​ ತಾರೆ ಸಿಂಧು ಸೆಮೀಸ್​ನಲ್ಲಿ ವೈಫಲ್ಯ ಅನುಭವಿಸಿದರು. ಮೊದಲೆರೆಡು ಸೆಟ್​ಗಳಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದ್ದಾರೆ.

ಈ ಹಿಂದೆ ಪಿ.ವಿ. ಸಿಂಧು ಹಾಗೂ ತೈ ಜು ಯಿಂಗ್​ 18 ಬಾರಿ ಮುಖಾಮುಖಿಯಾಗಿದ್ದು,, ಇದರಲ್ಲಿ ತೈ ಜು ಯಿಂಗ್ 13 ಪಂದ್ಯಗಳನ್ನು ಗೆದ್ದಿದ್ದರೆ, ಸಿಂಧು ಕೇವಲ 5 ಗೆಲುವು ದಾಖಲಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img