Sunday, September 19, 2021
Homeಸುದ್ದಿ ಜಾಲರೋಹಿಣಿ ಸಿಂಧೂರಿಗೆ ಹೈಕೋರ್ಟ್​​​ ಕಠಿಣ ಎಚ್ಚರಿಕೆ

ಇದೀಗ ಬಂದ ಸುದ್ದಿ

ರೋಹಿಣಿ ಸಿಂಧೂರಿಗೆ ಹೈಕೋರ್ಟ್​​​ ಕಠಿಣ ಎಚ್ಚರಿಕೆ

ಮೈಸೂರು : ಕುರುಬಾರಹಳ್ಳಿ, ಚೌಡಹಳ್ಳಿ, ಆಲನಹಳ್ಳಿ ಮೂರು ಸರ್ವೇ ನಂಬರ್​ಗಳ ಭೂ ಹಿಡುವಳಿದಾರರ ಹೆಸರಿಗೆ ಆಗಸ್ಟ್‌ 13ರೊಳಗೆ ಖಾತೆ ಮಾಡದಿದ್ದರೆ ಐಎಎಸ್​​​ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ತಹಶೀಲ್ದಾರ್ ರಕ್ಷಿತ್ ಅವರನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ಹೈಕೋರ್ಟ್​​​ ಎಚ್ಚರಿಕೆ ನೀಡಿದೆ.

ಸರ್ವೇ ನಂ4ರ ವ್ಯಾಪ್ತಿಯಲ್ಲಿರುವ ಕುರುಬಾರಹಳ್ಳಿ, ಚೌಡಹಳ್ಳಿ, ಆಲನಹಳ್ಳಿ ಭೂ ವಿವಾದದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹೈಕೋರ್ಟ್‌ಗೆ ಹಾಜರಾದ ರೋಹಿಣಿ ಸಿಂಧೂರಿ ಮತ್ತು ತಹಶೀಲ್ದಾರ್ ರಕ್ಷಿತ್​ ಅವರಿಗೆ ಆಗಸ್ಟ್‌ 13ರೊಳಗೆ ಈ ಮೂರು ಸರ್ವೇ ನಂಬರ್​ಗಳ ಭೂ ಹಿಡುವಳಿದಾರರ ಹೆಸರಿಗೆ ಖಾತೆ ಮಾಡಿಸಿ ಇಲ್ಲದಿದ್ದರೆ ಇಬ್ಬರನ್ನೂ ಜೈಲಿಗೆ ಕಳುಹಿಸುತ್ತೇವೆಂದು ನ್ಯಾಯಾಧೀಶರು ಎಚ್ಚರಿಸಿದರು.

ಹೈಕೋರ್ಟ್ ಸೂಚನೆಯಿಂದ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ವರ್ಗಾವಣೆ ಆಗಿರುವ ಕಾರಣ ಖಾತೆ ಮಾಡುವ ಅಧಿಕಾರವಿಲ್ಲ. ಖಾತೆ ಮಾಡುವ ಅಧಿಕಾರ ಮಾತ್ರ ಡಿಸಿಗೆ ಇರುತ್ತದೆ. ತಾಂತ್ರಿಕ ಕಾರಣದಿಂದ ಸಿಂಧೂರಿಗೆ ಭಾರೀ ಇಕ್ಕಟ್ಟು ಎದುರಾಗಿದೆ. ಖಾತೆ ಮಾಡಿಸುವ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕದೆ ಸಿಂಧೂರಿಗೆ ಬೇರೆ ದಾರಿ ಇಲ್ಲ ಎನ್ನಲಾಗಿದೆ‌‌.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img