Saturday, September 18, 2021
Homeರಾಜಕೀಯಸಚಿವ ಸ್ಥಾನಕ್ಕಾಗಿ ಮುಂದುವರೆದ ಲಾಬಿ

ಇದೀಗ ಬಂದ ಸುದ್ದಿ

ಸಚಿವ ಸ್ಥಾನಕ್ಕಾಗಿ ಮುಂದುವರೆದ ಲಾಬಿ

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೂ, ಕ್ಯಾಬಿನೆಟ್ ರಚನೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದ್ದರೂ ಕೂಡ ಅವರ ಭೇಟಿಗೆ ಶಾಸಕರು ಬರತೊಡಗಿದ್ದು, ಸಚಿವ ಸ್ಥಾನದ ಕುರಿತಂತೆ ಸಮಾಲೋಚನೆ ನಡೆಸತೊಡಗಿದ್ದಾರೆ.

ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಭಾರಿ ಪೈಪೋಟಿ ಶುರುವಾಗಿದೆ. ಲಾಬಿ ಕೂಡಾ ಜೋರಾಗಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳು ನಾಯಕರನ್ನು ಎಡತಾಕತೊಡಗಿದ್ದಾರೆ. ಅನೇಕರು ದೆಹಲಿಗೂ ದೌಡಾಯಿಸಿದ್ದಾರೆ. ಇದೇ ವೇಳೆ ಯಡಿಯೂರಪ್ಪ ಅವರ ಭೇಟಿಗೆ ಹೆಚ್ಚಿನ ಶಾಸಕರು ಬರತೊಡಗಿದ್ದಾರೆ. ಶೀಘ್ರವೇ ಸಚಿವ ಸಂಪುಟ ರಚನೆಯಾಗಲಿದೆ. ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಿಎಂ ಆಯ್ಕೆಯಲ್ಲಿ ಹೈಕಮಾಂಡ್ ಕೈಗೊಂಡ ನಿರ್ಧಾರದ ಬಗ್ಗೆ ಅರಿತಿರುವ ಶಾಸಕರು ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪರನ್ನು ಭೇಟಿಯಾಗಿ ಮನವಿ ಮಾಡತೊಡಗಿದ್ದಾರೆನ್ನಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img