Wednesday, September 22, 2021
Homeಜಿಲ್ಲೆಮೈಸೂರುಜನತಾ ಪರಿವಾರದಿಂದ ಹೋದ ಬೊಮ್ಮಾಯಿ ಮಾತು ಬಿಜೆಪಿ ವರಿಷ್ಠರು ಕೇಳ್ತಾರಾ: ಸಿದ್ದರಾಮಯ್ಯ

ಇದೀಗ ಬಂದ ಸುದ್ದಿ

ಜನತಾ ಪರಿವಾರದಿಂದ ಹೋದ ಬೊಮ್ಮಾಯಿ ಮಾತು ಬಿಜೆಪಿ ವರಿಷ್ಠರು ಕೇಳ್ತಾರಾ: ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿನ ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜನರು ಎದುರಿಸಿರುವ ಪ್ರವಾಹ ಪರಿಸ್ಥಿತಿ ಸಮಸ್ಯೆ ಮತ್ತು ಕೋವಿಡ್ ನಿಯಂತ್ರಣಕ್ಕೆ ಅಧಿಕಾರಿಗಳ ಮೂಲಕ ಸರ್ಕಾರ ಕೆಲಸ ಮಾಡಿಸಬೇಕು, ಸಚಿವ ಸಂಪುಟ ಇಲ್ಲದಿದ್ದರೇನು, ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಬೇಕು, ಅದರೊಟ್ಟಿಗೆ ಶೀಘ್ರವೇ ಸಚಿವ ಸಂಪುಟ ರಚನೆಯಾಗಬೇಕೆಂದು ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಕಾಂಗ್ರೆಸ್ ವಿಭಾಗೀಯ ಮಟ್ಟದ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಏಕ ವ್ಯಕ್ತಿಯಿಂದ ರಾಜ್ಯಕ್ಕೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಕೂಡಲೇ ಅಧಿಕಾರಿಗಳಿಗೆ ತಕ್ಕ ಸೂಚನೆ ನೀಡಿ ಕ್ರಮ ಕೈಗೊಳ್ಳಬೇಕು, ಅದರ ಜೊತೆಗೆ ಸಚಿವ ಸಂಪುಟ ರಚನೆಯಾಗಬೇಕೆಂದು ಆಗ್ರಹಿಸಿದ್ದಾರೆ.

ನಿನ್ನೆ ಬಸವರಾಜ ಬೊಮ್ಮಾಯಿಯವರು ಪ್ರಧಾನಿ, ಗೃಹ ಸಚಿವರನ್ನು ಭೇಟಿ ಮಾಡಿ ಸಚಿವ ಸಂಪುಟ ರಚನೆ ಬಗ್ಗೆ ಮಾತನಾಡಿರುವಂತೆ ಕಾಣುತ್ತಿಲ್ಲ, ನಿನ್ನೆಯೇ ಮಾತನಾಡಿ ಅಂತಿಮಗೊಳಿಸಬೇಕಾಗಿತ್ತು. ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಾದ ಪರಿಹಾರ ಹಣವನ್ನು, 11 ಸಾವಿರ ಕೋಟಿ ರೂಪಾಯಿ ಜಿಎಸ್ ಟಿ ಪರಿಹಾರ ಮೊತ್ತವನ್ನೇ ಕೊಟ್ಟಿಲ್ಲ, 2019ರಲ್ಲಿ ರಾಜ್ಯದಲ್ಲಿ ಬಂದ ಪ್ರವಾಹಕ್ಕೆ ಪೂರ್ಣವಾಗಿ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಿಲ್ಲ. ಬಹಳ ಮಂದಿಗೆ 10 ಸಾವಿರ ರೂಪಾಯಿ, ಮನೆಗಳನ್ನು ಕಟ್ಟಿಕೊಟ್ಟಿಲ್ಲ ಎಂದು ಆರೋಪಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img