Sunday, September 19, 2021
Homeಜಿಲ್ಲೆಬೆಂಗಳೂರುಯಮ ವೇಗದಲ್ಲಿ ಬಂದ ಟ್ರಕ್​​ನಿಂದ ಕೂದಲೆಳೆಯ ಅಂತರದಲ್ಲಿ ಬಚಾವಾದ ಟೋಲ್ ಸಿಬ್ಬಂದಿ

ಇದೀಗ ಬಂದ ಸುದ್ದಿ

ಯಮ ವೇಗದಲ್ಲಿ ಬಂದ ಟ್ರಕ್​​ನಿಂದ ಕೂದಲೆಳೆಯ ಅಂತರದಲ್ಲಿ ಬಚಾವಾದ ಟೋಲ್ ಸಿಬ್ಬಂದಿ

ಏರ್​​ಪೋರ್ಟ್ ಟೋಲ್​​ನಲ್ಲಿ ಯಮ ವೇಗದಲ್ಲಿ ಬಂದ ಟ್ರಕ್​​ನಿಂದ ಟೋಲ್ ಸಿಬ್ಬಂದಿ ಕೂದಲೆಳೆಯ ಅಂತರದಲ್ಲಿ ಬಚಾವ್​ ಆಗಿದ್ದಾರೆ. ಈ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಿನ್ನೆ (ಶುಕ್ರವಾರ) ಮಧ್ಯಾಹ್ನ ದೇವನಹಳ್ಳಿಯ ಸಾದಹಳ್ಳಿ ಟೋಲ್ ಬಳಿ ಈ ಘಟನೆ ನಡೆದಿದೆ. ಕಂಠ ಪೂರ್ತಿ ಕುಡಿದ ಚಾಲಕನೊಬ್ಬ ಬೃಹತ್ ಟ್ರಕ್ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಟೋಲ್​​ನಲ್ಲಿ ಅತಿ ವೇಗವಾಗಿ ಟ್ರಕ್ ಚಲಿಸುತ್ತಿದ್ದು, ಟ್ರಕ್ ನಿಲ್ಲಿಸುವಂತೆ ಟೋಲ್ ಸಿಬ್ಬಂದಿ ಸೂಚನೆ ನೀಡುತ್ತಿದ್ದರೂ ಚಾಲಕ ಯಾವುದಕ್ಕೂ ಕೇರ್ ಮಾಡದೆ ನುಗ್ಗಿದ್ದಾನೆ. ಚಾಲಕ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ಟ್ರಕ್​​ ಚಾಲಕನ ಪತ್ತೆ ಕಾರ್ಯ ನಡೆಯುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img