Sunday, September 19, 2021
Homeಸುದ್ದಿ ಜಾಲಮೆಟ್ರೋ ಎರಡನೇ ಹಂತದ ಕಾಮಗಾರಿಗೆ ಮತ್ತೊಂದು‌ ವಿಘ್ನ

ಇದೀಗ ಬಂದ ಸುದ್ದಿ

ಮೆಟ್ರೋ ಎರಡನೇ ಹಂತದ ಕಾಮಗಾರಿಗೆ ಮತ್ತೊಂದು‌ ವಿಘ್ನ

ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಆರಂಭವಾದಗಿಂದ ಒಂದಲ್ಲ ಒಂದು ಸಮಸ್ಯೆ ಎದುರಾಗ್ತಾನೆ‌ ಇದೆ.‌ ಎಲ್ಲಾ ಅಡೆ ತಡೆಗಳನ್ನ ಮೀರಿ ಮತ್ತೆ ಕಾಮಗಾರಿ ಆರಂಭ ಮಾಡುತ್ತಿರುವ ಮೆಟ್ರೋ ನಿಯಮಕ್ಕೆ ಪುನಃ ಹೊಸದೊಂದು ಸವಾಲ್ ಎದುರಾಗಿದೆ.‌

ಸುಮಾರು 21 ಕಿ.ಮೀ ಉದ್ದ ನಾಗವಾರ ಗೊಟ್ಟಿಗೆರೆ ಮಾರ್ಗಕ್ಕೆ 350 ಮರಗಳು ಅಡ್ಡಿಯಾಗಿವೆಯಂತೆ. ಪ್ರತಿ ಬಾರಿ ನಮ್ಮ ಮೆಟ್ರೋ ಹೊಸ ಹೊಸ ಮಾರ್ಗದ ಕಾಮಗಾರಿ ಶುರುವಾಗುವಾಗ ಒಂದಲ್ಲಾ ಒಂದು ವಿಘ್ನಗಳು ನಮ್ಮ ಮೆಟ್ರೊಗೆ ಎದುರಾಗುತ್ತಲೇ ಇರುತ್ತದೆ. ಈ ಬಾರಿಯೂ ನಾಗವಾರ ಗೊಟ್ಟಿಗೆರೆ ನೂತನ ಮಾರ್ಗ ನಿರ್ಮಾಣ ಕಾಮಗಾರಿಗೂ ಅಂಥದ್ದೇ ಒಂದು ಸಮಸ್ಯೆ ಜೋತು ಬಿದ್ದಿದೆ.

ನಾಗವಾರ ಗೊಟ್ಟಿಗೆರೆ ನಡುವಣ ಮೆಟ್ರೋ ಹಾದಿ ನಿರ್ಮಾಣಕ್ಕೆ 350 ಮರಗಳು ತಡೆಗೋಡೆಯಾಗಿ ನಿಂತಿದೆ. ಇದನ್ನು ಕಡಿದು ಕಾಮಗಾರಿ ಮುಂದುವರೆಸಲು‌ ಯೋಚಿಸಿದ್ದ ನಮ್ಮ ಮೆಟ್ರೋಗೆ ಹೈ ಕೋರ್ಟ್ ಕಿವಿ ಹಿಂಡಿತ್ತು. ಇದೀಗ ಹೈಕೋರ್ಟ್ ನ ಮಾತಿಗೆ ತಲೆಬಾಗಿದ ನಮ್ಮ ಮೆಟ್ರೋ ಕಾಮಗಾರಿ ಮತ್ತೆ ಶುರು ಮಾಡಿದೆ. ಆದರೆ 350 ಮರಗಳನ್ನು ಕಡಿಯುವುದೇನೋ‌ ಸರಿ. ಆದರೆ ಅದಕ್ಕೆ ಬದಲಾಗಿ ಒಂದು ಮರಕ್ಕೆ‌ ಹತ್ತು ಮರಗಳನ್ನು ನೆಡಲು ನಮ್ಮ ಮೆಟ್ರೋ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕಡಿಯಲು ಹೊರಟ ನಮ್ಮ ಮೆಟ್ರೋಗೆ ಹೈ ಕೋರ್ಟ್ ಚಾಟಿ ಬೀಸಿತ್ತು. ಪ್ರಕರಣದ ಬಗ್ಗೆ ವಿಚಾರಿಸಿ ನಮ್ಮ ಮೆಟ್ರೋಗೆ ಖಡಕ್ ತಾಕೀತು ಮಾಡಿದ್ದ ಹೈ ಕೋರ್ಟ್, ಒಂದು‌ ಮರ‌ ಕಡಿದರೆ 10 ಸಸಿ ನೆಡಬೇಕು ಎಂದು ಆದೇಶಿಸಿತ್ತು. ಅದೂ ಕೂಡ ನಗರದ ಒಳಭಾಗದಲ್ಲೇ ಸಸಿ ನೆಡಬೇಕು, ನಗರದ ಹೊರಗಡೆ ನೆಟ್ಟರೆ ಆಗಲ್ಲ ಎಂದಿತ್ತು ನ್ಯಾಯಾಲಯ. ಹೀಗಾಗಿ ಒಂದು ಮರದ ಬದಲಿಗೆ ಹತ್ತು ಸಸಿ ನೆಡಲು ಮುಂದಾಗಿದೆ ನಮ್ಮ ಮೆಟ್ರೋ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img