Wednesday, September 22, 2021
Homeಸುದ್ದಿ ಜಾಲಬ್ರಿಟನ್ ನೌಕೆ ಮೇಲೆ ದಾಳಿ

ಇದೀಗ ಬಂದ ಸುದ್ದಿ

ಬ್ರಿಟನ್ ನೌಕೆ ಮೇಲೆ ದಾಳಿ

ಓಮಾನ್ ಕರಾವಳಿಯ ಅರೇಬಿಯನ್ ಸಮುದ್ರದಲ್ಲಿ ನಮ್ಮ ಹಡಗಿನ ಮೇಲೆ ದಾಳಿ ನಡೆಸಲಾಗಿದೆ ಎಂದು ಬ್ರಿಟಿಷ್ ಸೇನೆ ತಿಳಿಸಿದೆ. ಘಟನೆ ಕುರಿತಂತೆ ತನಿಖೆ ನಡೆಯುತ್ತಿದೆ. ಓಮನ್ ರಾಷ್ಟ್ರದ ದ್ವೀಪವಾದ ಮಾಸಿರಾ ಬಳಿ ಗುರುವಾರ ತಡರಾತ್ರಿ ದಾಳಿ ನಡೆದಿದೆ ಎಂದು ಬ್ರಿಟನ್ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಓಮನ್ ಸೇನೆ ಈವರೆಗೆ ದಾಳಿ ಬಗ್ಗೆ ಯಾವುದೇ ರೀತಿಯ ವಿವರ ನೀಡಿಲ್ಲ. ಆದರೆ, ಇದು ಕಡಲ್ಗಳ್ಳರ ಕೃತ್ಯವೇ ಎಂಬುದರ ಬಗ್ಗೆ ಸಂಶಯ ವ್ಯಕ್ತವಾಗಿದೆ. ಮಧ್ಯಪ್ರಾಚ್ಯದಲ್ಲಿ ಗಸ್ತು ತಿರುಗುತ್ತಿದ್ದ ಅಮೆರಿಕದ ನೌಕಾಪಡೆಯ ಯುಎಸ್‍ನ ಯುದ್ಧನೌಕೆಗೆ ದಾಳಿ ಬಗ್ಗೆ ತಿಳಿಸಲಾಯಿತಾದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದೊಂದು ತೀವ್ರ ಆತಂಕದ ವಿಷಯವಾಗಿದೆ ಎಂದು ಬ್ರಿಟನ್ ಹೇಳಿದೆ.

ವಿಯೆನ್ನಾದಲ್ಲಿ ಇರಾನ್ ಅಣ್ವಸ್ತ್ರ ಒಪ್ಪಂದ ನಿರ್ಲಕ್ಷಿಸಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಉದ್ವಿಗ್ನತೆ ಉದ್ಭವಿಸಿದೆ. ಮಧ್ಯಪ್ರಾಚ್ಯ ಹಾಗೂ ಐರೋಪ್ಯ ರಾಷ್ಟ್ರಗಳ ನಡುವೆ ಭಿನ್ನಮತಗಳು ಕಳೆದ ನಾಲ್ಕೈದು ವರ್ಷಗಳಿಂದ ಮುಂದುವರಿದಿದ್ದು, ಅಮೆರಿಕ ಕೂಡ ಈ ಕುರಿತು ಸಾಕಷ್ಟು ಅಂತರ ಕಾಪಾಡಿಕೊಂಡಿದೆ ಮತ್ತು ಇರಾನ್ ವಿರುದ್ಧ ಕಠಿಣ ಕ್ರಮಗಳನ್ನೂ ಕೂಡ ಕೈಗೊಂಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img