Wednesday, September 22, 2021
Homeಕ್ರೈಂ ನ್ಯೂಸ್ರಿಕ್ಷಾದಲ್ಲಿ ಗಾಂಜಾ ಸಾಗಾಟ..

ಇದೀಗ ಬಂದ ಸುದ್ದಿ

ರಿಕ್ಷಾದಲ್ಲಿ ಗಾಂಜಾ ಸಾಗಾಟ..

ರಿಕ್ಷಾದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ತಪಾಸಣೆ ನಡೆಸಲು ನಿಲ್ಲಿಸಲು ಮುಂದದಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ ಹೊಡೆದಿದ್ದು, ಈ ವೇಳೆ ಇಬ್ಬರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸರು ವಶಕ್ಕೆ ಪಡೆದ ಘಟನೆ ವಿಟ್ಲ ಕಾಶಿಮಠದಲ್ಲಿ ನಡೆದಿದೆ. ಬಂಧಿತರನ್ನು ಆಸೀಫ್ ಯಾನೆ ಅಚಿ (28) ಫರಾಝ್ (23) ಎಂದು ಗುರುತಿಸಲಾಗಿದೆ.

ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾಗ ಉಕ್ಕುಡ ಕಡೆಯಿಂದ ವಿಟ್ಲ ಪೇಟೆ ಕಡೆಗೆ ರಿಕ್ಷಾ ಹೋಗುವುದನ್ನು ಗಮನಿಸಿದಾಗ ಆಟೋ ರಿಕ್ಷಾವನ್ನು ಅದರ ಚಾಲಕನಿಗೆ ನಿಲ್ಲಿಸಲು ಸೂಚನೆ ನೀಡಿದಾಗ ರಿಕ್ಷಾ ಚಾಲಕ ಒಮ್ಮೆಲೇ ಆಟೋ ರಿಕ್ಷಾವನ್ನು ತಿರುಗಿಸಿದ ಕಾರಣ ಚಾಲಕನ ನಿಯಂತ್ರಣ ತಪ್ಪಿ 30 ಅಡಿ ದೂರದಲ್ಲಿ ಮಗುಚಿ ಬಿತ್ತು. ಅವರ ರಕ್ಷಣೆಗೆ ಸಿಬ್ಬಂದಿ ಹೋದಾಗ ಅವರು ಓಡಿ ಹೋಗಲು ಪ್ರಯತ್ನಿಸಿದಾಗ ಪೊಲೀಸ್ ಸಿಬ್ಬಂದಿ ಹಿಡಿದು ವಿಚಾರಣೆ ನಡೆಸಿದರು.


ರಿಕ್ಷಾ ಚಾಲಕನ ಸೀಟಿನ ಅಡಿಯಲ್ಲಿದ್ದ ಒಂದು ಕಟ್ಟನ್ನು ತೆಗೆದು ಇದು ಗಾಂಜಾದ ಕಟ್ಟು ಎಂದು ತೋರಿಸಿ ಇದನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದಾಗಿ ಅವರು ತಿಳಿಸಿದಾಗ ಕೂಡಲೇ ವಾಹನವನ್ನು ಮತ್ತು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img