Wednesday, September 22, 2021
Homeಸುದ್ದಿ ಜಾಲಠಾಣೆ ಮೆಟ್ಟಿಲೇರಿದ 'ಅಟ್ಟಹಾಸ' ಚಿತ್ರದ ನಿರ್ದೇಶಕ

ಇದೀಗ ಬಂದ ಸುದ್ದಿ

ಠಾಣೆ ಮೆಟ್ಟಿಲೇರಿದ ‘ಅಟ್ಟಹಾಸ’ ಚಿತ್ರದ ನಿರ್ದೇಶಕ

ಬೆಂಗಳೂರು: ಸೈನೈಡ್, ಅಟ್ಟಹಾಸ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಎಂ.ಆರ್.ರಮೇಶ್ ಅವರು ತಮಗೆ 50 ಲಕ್ಷ ರೂ. ವಂಚನೆಯಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ನಿರ್ಮಾಪಕ ಹಾಗೂ ವಿತರಕ ಮಹೇಶ್ ಕೊಠಾರಿ ಮತ್ತು ಖಾಸಗಿ ಮನರಂಜನಾ ವಾಹಿನಿ ಹಾಗೂ ಡಿಸ್ನಿ ಹಾಟ್​ಸ್ಟಾರ್ ಆಪ್ ವಿರುದ್ಧ ನಿರ್ದೇಶಕ ಎಂ.ಆರ್.ರಮೇಶ್ ನೀಡಿದ ದೂರಿನ  ಆಧಾರದ ಮೇರೆಗೆ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

2013 ರಲ್ಲಿ ಅಟ್ಟಹಾಸ ಚಿತ್ರವನ್ನು ನಿರ್ಮಿಸಿ, ನಿರ್ದೆಶಿಸಿದ್ದ ಎಂ.ಆರ್.ರಮೇಶ್, ಖಾಸಗಿ ವಾಹಿನಿಯಲ್ಲಿ ಚಿತ್ರ ಪ್ರಸಾರ ಮಾಡಲು ಮಹೇಶ್ ಕೊಠಾರಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಒಪ್ಪಂದದಂತೆ ಚಿತ್ರ ತೆರೆಕಂಡ ಆರು ತಿಂಗಳ ಬಳಿಕ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಯಿತು. 2018 ರಲ್ಲಿ ಮಹೇಶ್ ಕೊಠಾರಿ ಇದೇ ಚಿತ್ರವನ್ನು ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಮಾಡುವ ಸಲುವಾಗಿ ಮಾತುಕತೆ ನಡೆಸಿದ್ದರು. ಜೊತೆಗೆ 50 ಲಕ್ಷಕ್ಕೆ ಮಾರಾಟ ಮಾಡುವುದಾಗಿ ನಂಬಿಸಿದ್ದರು‌.

ಇದನ್ನು ನಂಬಿ ನಾನು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೆ. ನನ್ನ ಬಳಿ ಇಂಗ್ಲೀಷ್ ಸಬ್ ಟೈಟಲ್​ಯಿರುವ ಚಿತ್ರದ ಹಾರ್ಡ್ ಡಿಸ್ಕ್ ನೀಡಿದ್ದೆ‌. 2021ರ ವರೆಗೆ ಮಹೇಶ್ ಕೊಠಾರಿ ನನ್ನ ಸಂಪರ್ಕದಲ್ಲಿದ್ದರು. ನಂತರ ರಮೇಶ್ ಅಭಿಮಾನಿಗಳು ಒಟಿಟಿಯಲ್ಲಿ ಚಿತ್ರ ನೋಡಿದಾಗ ವಂಚಿಸಿರುವುದು ಬಯಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಚಾನೆಲ್, ಡಿಸ್ನಿ ಹಾಟ್​ಸ್ಟಾರ್ ಮತ್ತು ವಿತರಕರ ವಿರುದ್ಧ 50 ಲಕ್ಷ ವಂಚನೆ ಮಾಡಿರುವುದಾಗಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img