Wednesday, September 22, 2021
Homeಕೇರಳಕೇರಳದಲ್ಲಿ ಕೊರೊನಾ ಆರ್ಭಟ

ಇದೀಗ ಬಂದ ಸುದ್ದಿ

ಕೇರಳದಲ್ಲಿ ಕೊರೊನಾ ಆರ್ಭಟ

ತಿರುವನಂತಪುರಂ: ದೇಶದೆಲ್ಲೆಡೆ ಸದ್ಯ ಕೊರೋನಾ ಎರಡನೇ ಅಲೆ ಇಳಿಕೆಯಾಗುತ್ತಿದೆ. ಆದರೆ ಕೇರಳದಲ್ಲಿ ಮಾತ್ರ ಕೊರೋನಾ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದೆ. ಒಂದೇ ದಿನದಲ್ಲಿ ರಾಜ್ಯದಲ್ಲಿ 22 ಸಾವಿರಕ್ಕೂ ಅಧಿಕ ಪ್ರಕರಣ ದೃಢವಾಗಿದೆ.

ಮಂಗಳವಾರ 22,129 ಪ್ರಕರಣ ದಾಖಲಾಗುವ ಮೂಲಕ ರಾಜ್ಯದ ಒಟ್ಟಾರೆ ಪ್ರಕರಣಗಳ ಸಂಖ್ಯೆ 33 ಲಕ್ಷ ದಾಟಿದೆ. ರಾಜ್ಯದ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ. 12.35ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ1.45 ಲಕ್ಷಕ್ಕೆ ಏರಿಕೆಯಾಗಿದೆ. ಅಲ್ಲದೇ ಒಂದೇ ದಿನದಲ್ಲಿ 156 ಸೋಂಕಿತರು ಸಾವನ್ನಪ್ಪಿದ್ದಾರೆ.

ಭಾರತದಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 85 ಸಾವಿರ ಹಾಗೂ ಮೂರನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 22 ಸಾವಿರ ಸಕ್ರಿಯ ಪ್ರಕರಣಗಳಿವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img