Wednesday, September 22, 2021
Homeಸಿನಿಮಾಐಎಂಡಿಬಿ ರೇಟಿಂಗ್ ನಲ್ಲಿ ಕಿಚ್ಚನ 'ವಿಕ್ರಾಂತ್ ರೋಣ' ಟಾಪ್

ಇದೀಗ ಬಂದ ಸುದ್ದಿ

ಐಎಂಡಿಬಿ ರೇಟಿಂಗ್ ನಲ್ಲಿ ಕಿಚ್ಚನ ‘ವಿಕ್ರಾಂತ್ ರೋಣ’ ಟಾಪ್

ಬೆಂಗಳೂರು: ಈ ವರ್ಷ ತೆರೆ ಕಾಣಲಿರುವ ಸಿನಿಮಾಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಟಾಪ್ ನಲ್ಲಿದೆ.

ಬಹುಭಾಷೆಗಳಲ್ಲಿ ಬಿಡುಗಡೆಗೆ ರೆಡಿಯಾಗಿರುವ ‘ವಿಕ್ರಾಂತ್ ರೋಣ’ ಐಎಂಡಿಬಿ ರೇಟಿಂಗ್ ನಲ್ಲಿ ಅಗ್ರಸ್ಥಾನದಲ್ಲಿದೆ. ಹಾಗೆ ನೋಡಿದ್ರೆ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’, ಯಶ್ ನಟನೆಯ ‘ಕೆಜಿಎಫ್’ ಸಿನಿಮಾಗಳು ಮೊದಲೆರಡು ಸ್ಥಾನದಲ್ಲಿ ಇರಬಹುದು ಎನ್ನುವ ಲೆಕ್ಕಾಚಾರ ಇತ್ತು. ಆದರೆ, ಮೊದಲ ಸ್ಥಾನದಲ್ಲಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಇದೆ.

ಸುದೀಪ್ ‘ವಿಕ್ರಾಂತ್ ರೋಣ’ ಟಾಪ್ ಭಾರತೀಯ ಸಿನಿಮಾಗಳಿಗೆ ರೇಟಿಂಗ್ ನೀಡಿರುವ ಐಎಂಡಿಬಿ ಅಭಿಮಾನಿಗಳ ವಲಯದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಟಾಪ್‌ನಲ್ಲಿ ತಮ್ಮ ನೆಚ್ಚಿನ ಹೀರೋ ಸಿನಿಮಾ ಇದ್ದರೆ ಅದು ಹೆಮ್ಮೆಯಾಗಿ ಭಾವಿಸುವ ಟ್ರೆಂಡ್ ಇದೆ. ಇದೀಗ, ಭಾರತೀಯ ಅತಿ ಹೆಚ್ಚು ನಿರೀಕ್ಷೆಯ ಪಟ್ಟಿಯಲ್ಲಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಮೊದಲ ಸ್ಥಾನದಲ್ಲಿದೆ.

ಇನ್ನು ಎರಡನೇ ಸ್ಥಾನದಲ್ಲಿ ಕೆಜಿಎಫ್ ಚಾಪ್ಟರ್ 2 ಇದೆ, ಮೂರನೇ ಸ್ಥಾನದಲ್ಲಿ ‘ನವರಸ’ ಸಿನಿಮಾ ಹಾಗೂ ನಾಲ್ಕನೇ ಸ್ಥಾನದಲ್ಲಿ ‘ಶೇರ್‌ಷಾ’ ಇದೆ. ಐದನೇ ಸ್ಥಾನದಲ್ಲಿ ಅಲ್ಲು ಅರ್ಜುನ್-ಸುಕುಮಾರ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಪುಷ್ಪ ಸಿನಿಮಾ ಇದೆ, ಆರನೇ ಸ್ಥಾನದಲ್ಲಿ ‘ಭುಜ್: ದಿ ಪ್ರೈಡ್ ಆಫ್ ಇಂಡಿಯಾ’, ಏಳನೇ ಸ್ಥಾನದಲ್ಲಿ ‘ತಿಮ್ಮರಸು’, ಏಂಟನೇ ಸ್ಥಾನದಲ್ಲಿ ಆಲಿಯಾ ಭಟ್ ನಟನೆಯ ‘ಗಂಗುಬಾಯಿ ಕಥಿಯಾವಾಡಿ’, ಒಂಬತ್ತನೇ ಸ್ಥಾನದಲ್ಲಿ ‘ರಾಧೇ ಶ್ಯಾಮ್’ ಹಾಗೂ ಹತ್ತನೇ ಸ್ಥಾನದಲ್ಲಿ ‘ಅನೆಕ್’ ಇದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img