Wednesday, September 22, 2021
Homeಜಿಲ್ಲೆಬೆಂಗಳೂರುವಿಧಾನಸೌಧ ಇಂದು ಖಾಲಿ ಖಾಲಿ

ಇದೀಗ ಬಂದ ಸುದ್ದಿ

ವಿಧಾನಸೌಧ ಇಂದು ಖಾಲಿ ಖಾಲಿ

ಬೆಂಗಳೂರು: ನಿನ್ನೆಯವರೆಗೆ ಗಿಜಿಗಿಡುತ್ತಿದ್ದ ವಿಧಾನಸೌಧ ಇಂದು ಬಿಕೋ ಎನ್ನುತ್ತಿತ್ತು. ಬಿ.ಎಸ್.ಯಡಿಯೂರಪ್ಪನವರು ನಿನ್ನೆ ಬ್ಯಾಂಕ್ವೆಟ್ ಹಾಲ್​ನಲ್ಲಿ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ನಡೆಸಿದ ನಂತರ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬೆಳಗ್ಗೆ ಲವಲವಿಕೆಯಿಂದಿದ್ದ ಮಂತ್ರಿಮಂಡಲದ ಸಹೋದ್ಯೋಗಿಗಳು ಬಿಎಸ್‌ವೈ ರಾಜೀನಾಮೆ ನೀಡಿದ ತಕ್ಷಣ ಮಂಕಾಗಿ ಹೋದರು‌.

ಸಿಎಂ ರಾಜೀನಾಮೆ ನಡುವೆಯೇ ಮಂತ್ರಿಮಂಡಲವೂ ವಿಸರ್ಜನೆಗೊಂಡಿತು. ಮಧ್ಯಾಹ್ನದ ವೇಳೆಗೆ ವಿಧಾನಸೌಧದಲ್ಲಿದ್ದ ಜನಜಂಗುಳಿ ಕರಗಿತು. ಸಚಿವರೆಲ್ಲರೂ ಮಾಜಿಗಳಾಗುತ್ತಿದ್ದಂತೆಯೇ ವಿಧಾನಸೌಧ ಹಾಗೂ ವಿಕಾಸಸೌಧ ಖಾಲಿ ಖಾಲಿಯಾಗಿದೆ. ಸಚಿವರ ಕಚೇರಿಗಳಲ್ಲಿ ಅಳವಡಿಸಿದ್ದ ನಾಮಫಲಕಗಳನ್ನು ತೆರವುಗೊಳಿಸಲಾಗಿದೆ. ಯಾರೊಬ್ಬ ಮಾಜಿ ಸಚಿವರು ಸಹ ವಿಧಾನಸೌಧಕ್ಕೆ ಇಂದು ಆಗಮಿಸಲಿಲ್ಲ.

ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಸದಾ ಜನರು ತಂಬಿರುತ್ತಿದ್ದರು. ಇಂದು ಯಾರೂ ಸಹ ಬರಲಿಲ್ಲ. ಮಾಜಿ ಸಚಿವರು ತಮ್ಮ ನಿವಾಸಗಳಲ್ಲೇ ಇದ್ದರೆ, ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿದ್ದು, ಮುಂದಿನ ಮುಖ್ಯಮಂತ್ರಿ ಯಾರಾಗಬಹುದೆಂಬ ಕುತೂಹಲದಲ್ಲಿದ್ದಾರೆ. ಇನ್ನೊಂದೆಡೆ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿರುವ ನೌಕರರು ಸಹ ಸಿಎಂ ರೇಸ್‌ನಲ್ಲಿರುವವರ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img