Wednesday, September 22, 2021
Homeಸಿನಿಮಾ'ಲಂಕೆ' ಚಿತ್ರದ ಮತ್ತೊಂದು ಹಾಡು ನಾಳೆ ರಿಲೀಸ್

ಇದೀಗ ಬಂದ ಸುದ್ದಿ

‘ಲಂಕೆ’ ಚಿತ್ರದ ಮತ್ತೊಂದು ಹಾಡು ನಾಳೆ ರಿಲೀಸ್

ಎಮ್.ಡಿ. ರಾಮ್ ಪ್ರಸಾದ್ ನಿರ್ದೇಶನದ ಲೂಸ್ ಮಾದ ಯೋಗಿ ಅಭಿನಯದ ‘ಲಂಕೆ’ ಚಿತ್ರದ ‘ನಯನಕೆ ನಯನ’ ಎಂಬ ವಿಡಿಯೋ ಹಾಡನ್ನು ನಾಳೆ ಬೆಳಿಗ್ಗೆ 10 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ.

ಇತ್ತೀಚೆಗಷ್ಟೇ ಈ ಸಿನಿಮಾದ ‘ನೋಡು ನೋಡು ಯೋಗಿ ಬಾಸು ಮಾಸು ಎಂಟ್ರಿ ಕೊಟ್ಟೆ ಬಿಟ್ಟ’ ಎಂಬ ಲಿರಿಕಲ್ ವಿಡಿಯೋವನ್ನು ರಿಲೀಸ್ ಮಾಡಿದ್ದರು. ಈ ಹಾಡು ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಂಡಿತ್ತು.

ವರಮಹಾಲಕ್ಷ್ಮಿ ಹಬ್ಬದಂದು ತೆರೆಮೇಲೆ ಬರಲು ಸಜ್ಜಾಗಿರುವ ಈ ಚಿತ್ರದಲ್ಲಿ ಕಾವ್ಯ ಶೆಟ್ಟಿ, ಕೃಷಿ ತಾಪಂಡ, ಸಂಚಾರಿ ವಿಜಯ್, ಗಾಯತ್ರಿ ಜಯರಾಮ್, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ ಸೇರಿದಂತೆ ಮುಂತಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ದಿ ಗ್ರೇಟ್ ಎಂಟರ್ ಟೇನರ್ ಬ್ಯಾನರ್ ನಡಿ ಪಟೇಲ್ ಶ್ರೀನಿವಾಸ್ ನಾಗವಾರ ಹಾಗೂ ಶ್ರೀಮತಿ ಸುರೇಖಾ ರಾಂಪ್ರಸಾದ್ ಈ ಸಿನಿಮಾ ನಿರ್ಮಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img