Wednesday, September 22, 2021
Homeಜಿಲ್ಲೆಬೆಂಗಳೂರುSSLC ಪರೀಕ್ಷೆ ಯಶಸ್ವಿ : ಸುರೇಶ್ ಕುಮಾರ್

ಇದೀಗ ಬಂದ ಸುದ್ದಿ

SSLC ಪರೀಕ್ಷೆ ಯಶಸ್ವಿ : ಸುರೇಶ್ ಕುಮಾರ್

ಬೆಂಗಳೂರು : ಮಹತ್ವದ ಎಸ್ ಎಸ್ ಎಲ್ ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿದಿದ್ದು, ಇಂತಹ ಪರೀಕ್ಷೆಗೆ ಕಾರಣರಾದಂತ ಎಲ್ಲರಿಗೂ ಧನ್ಯವಾದವನ್ನು ತಿಳಿಸಿರುವಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು, ಆಗಸ್ಟ್.10ರೊಳಗೆ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ (SSLC Exam Result) ಪ್ರಕಟಿಸೋದಾಗಿ ತಿಳಿಸಿದರು.

ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಎಸ್ ಎಸ್ ಎಲ್ ಸಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಯಾವುದೇ ಸಮಸ್ಯೆ ಇಲ್ಲದೇ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ಹಾಜರಾಗದೇ ಇರುವಂತ ವಿದ್ಯಾರ್ಥಿಗಳಿಗೆ ಆಗಸ್ಟ್ ನಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಯಾವುದೇ ವಿದ್ಯಾರ್ಥಿಗಳು ಹತಾಶರಾಗಬಾರದು ಎಂದರು.

ಜುಲೈ.19 ಮತ್ತು ಜುಲೈ.22ರ ಇಂದಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು (SSLC Exam Result) ಆಗಸ್ಟ್ 10ರೊಳಗೆ ಪ್ರಕಟಿಸುವ ಸಿದ್ಧತೆ ಕೈಗೊಳ್ಳಲಾಗಿದೆ. ಆ ಕುರಿತಂತೆ ಸದ್ಯದಲ್ಲೇ ಮಾಹಿತಿಯನ್ನು ನೀಡಲಾಗುತ್ತದೆ. ಓವರ್ ಆಲ್ ಶೇ.99.69 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img