Wednesday, September 22, 2021
Homeಕ್ರೈಂ ನ್ಯೂಸ್ಕುಂದ್ರಾ ಬಂಧನ ಅವಧಿ ಜು.27ರ ವರೆಗೆ ವಿಸ್ತರಣೆ

ಇದೀಗ ಬಂದ ಸುದ್ದಿ

ಕುಂದ್ರಾ ಬಂಧನ ಅವಧಿ ಜು.27ರ ವರೆಗೆ ವಿಸ್ತರಣೆ

ಮುಂಬೈ: ನೀಲಿ ಚಿತ್ರಗಳ ನಿರ್ಮಾಣ, ಪ್ರಸಾರ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್‌ಕುಂದ್ರ ಪೊಲೀಸ್ ಕಸ್ಟಡಿ ಅವಧಿಯನ್ನು ಮುಂಬೈ ಕೋರ್ಟ್ ಜುಲೈ 27ರ ವರೆಗೆ ವಿಸ್ತರಿಸಿದೆ.

ಕುಂದ್ರಾ ಅವರನ್ನು ಜುಲೈ 19 ರ ರಾತ್ರಿ ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ.

ಕುಂದ್ರಾ ಅವರ ಪೊಲೀಸ್ ಕಸ್ಟಡಿ ಅವದಿ ಶುಕ್ರವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಮತ್ತೆ ತಮ್ಮ ವಶಕ್ಕೆ ಪಡೆದಿದ್ದಾರೆ.

ಅಶ್ಲೀಲ ಚಿತ್ರಗಳನ್ನು ತಯಾರಿಸುವುದು ಮತ್ತು ಮಾರಾಟ ಮಾಡುವ ಅಕ್ರಮ ಚಟುವಟಿಕೆಯಿಂದ 45 ವರ್ಷದ ಉದ್ಯಮಿ ಆರ್ಥಿಕ ಲಾಭ ಗಳಿಸುತ್ತಿದ್ದಾರೆ ಎಂದು ಪೊಲೀಸರು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img