Wednesday, September 22, 2021
Homeಸಿನಿಮಾತಂದೆ ಹೊಡೆದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಜಗ್ಗೇಶ್..!

ಇದೀಗ ಬಂದ ಸುದ್ದಿ

ತಂದೆ ಹೊಡೆದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಜಗ್ಗೇಶ್..!

ಕನ್ನಡ ಚಿತ್ರರಂಗದ ಮೇರುನಟ ಜಗ್ಗೇಶ್‌ ನವರಸ ನಾಯಕನಾಗಿ ಸಕ್ಸಸ್ ಕಂಡವರು. ಆದರೆ ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳುಗಳನ್ನು ಅನುಭವಿಸಿರುವ ನಟ ಇವರು. ಪ್ರತಿ ಯಶಸ್ಸಿನ ಹಿಂದೆ ಸೋಲಿನ ಕಥೆ ಇದ್ದೇ ಇರುತ್ತದಂತೆ. ಹಾಗೆಯೇ ಇವರು ಕೂಡಾ​ ತಮ್ಮ ಬಾಲ್ಯದ ಕಹಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.

ಜಗ್ಗೇಶ್ ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ಹಂಚಿಕೊಂಡಿದ್ದಾರೆ. 1979ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, ಸೆಕೆಂಡ್ ಕ್ಲಾಸ್​ನಲ್ಲಿ ಪಾಸಾಗಿದ್ದರು. ಜಗ್ಗೇಶ್ ತೆಗೆದುಕೊಂಡಿದ್ದ ಈ ಅಂಕಗಳಿಗೆ ಅವರ ತಂದೆ ನಡುರೋಡಲ್ಲಿ ಹೊಡೆದಿದ್ದರಂತೆ. ಅದಕ್ಕೆ ಮನನೊಂದು ಜಗ್ಗೇಶ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಎಂಬ ವಿಚಾರವನ್ನು ಖುದ್ದು ಜಗ್ಗೇಶ್ ಬಹಿರಂಗಪಡಿಸಿದ್ದಾರೆ.

ಇನ್ನು ಕನ್ನಡ ಭಾಷೆ ಅಂತ ಬಂದಾಗ, ಕನ್ನಡ ಅಭಿಮಾನ ಮೆರೆಯುವ ಜಗ್ಗೇಶ್ 10ನೇ ತರಗತಿ ಪರೀಕ್ಷೆಯಲ್ಲಿ ಸಹ ಕನ್ನಡದಲ್ಲೇ ಹೆಚ್ಚು ಅಂಕ ಪಡೆದುಕೊಂಡಿರೋದು ವಿಶೇಷ. ಆಗ ಶಾಲೆಯ ಶುಲ್ಕ 8 ರೂಪಾಯಿ. 2 ಸೆಟ್ ಯೂನಿಫಾರಂ. ಯಾವುದೇ ಟ್ಯೂಷನ್ ಇರುತ್ತಿರಲಿಲ್ಲ. ರಾಗಿ ಮುದ್ದೆ ತಿಂಡಿ. ಅಮ್ಮನ ಪ್ರೀತಿ ಮತ್ತು ಆರೈಕೆ. ನನ್ನ ಇಂದಿನ ಸಾಧನೆಗೆ ಪತ್ನಿಯ ಬೆಂಬಲ ಹಾಗೂ ರಾಯರ ಆಶೀರ್ವಾದ ಕಾರಣ. ಮನಸಿದ್ದರೆ ಮಾರ್ಗ ಎಂದು ಜಗ್ಗೇಶ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img