Wednesday, September 22, 2021
Homeಬೆಂಗಳೂರುಬಿಎಸ್​​ವೈ ಸಿಟಿ ರೌಂಡ್ಸ್​​:ಹಲವೆಡೆ ಟ್ರಾಫಿಕ್ ಜಾಂ!

ಇದೀಗ ಬಂದ ಸುದ್ದಿ

ಬಿಎಸ್​​ವೈ ಸಿಟಿ ರೌಂಡ್ಸ್​​:ಹಲವೆಡೆ ಟ್ರಾಫಿಕ್ ಜಾಂ!

ಬೆಂಗಳೂರು: ನಾಯಕತ್ವ ಬದಲಾವಣೆಯ ವಿಚಾರ ಬಲವಾಗಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಅಭಿವೃದ್ಧಿ ಕಾರ್ಯಗಳಿಗೆ ವೇಗ ತುಂಬಲು ಮುಂದಾಗಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಬೆಂಗಳೂರು ನಗರ ಪ್ರದಕ್ಷಿಣೆಗೆ ಆರಂಭ ಮಾಡಿದ್ದಾರೆ.

ಬೆಳಗ್ಗೆ 11 ಗಂಟೆಯಿಂದ ಆನಂದ್ ರಾವ್​ ವೃತ್ತದಿಂದ ಆರಂಭವಾಗಿರುವ ಸಿಟಿ ರೌಂಡ್ಸ್ ಮಧ್ಯಾಹ್ನ 1.30ರ ವರೆಗೂ ಮುಂದುವರಿಯಲಿದೆ. ನಗರದ ನಾನಾ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಣೆ ಮಾಡಲಿರುವ ಸಿಎಂ, ಗಾಂಧಿನಗರ, ಗೋವಿಂದರಾಜನಗರ,ರಾಜರಾಜೇಶ್ವರಿನಗರ, ಸರ್.ಸಿ.ವಿ. ರಾಮನ್‌ನಗರ, ಶಾಂತಿನಗರ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಲಿದ್ದಾರೆ.

ಸಿಎಂ ಬಿಎಸ್​ವೈಗೆ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ್, ಸಚಿವರಾದ ಆರ್.ಅಶೋಕ್, ವಿ. ಸೋಮಣ್ಣ, ಬೈರತಿ ಬಸವರಾಜು, ಕೆ.ಗೋಪಾಲಯ್ಯ, ಎಸ್.ಟಿ. ಸೋಮಶೇಖರ್ ಸಾಥ್ ನೀಡಿದ್ದಾರೆ. ನಗರದಲ್ಲಿ ತುಂತುರು ಮಳೆಯಾಗುತ್ತಿದ್ದು, ಮಳೆಯ ನಡುವೆಯೂ ಸಿಎಂ ಬಿಎಸ್​​ವೈ ನಗರ ಪ್ರದಕ್ಷಿಣೆಯನ್ನು ಆರಂಭ ಮಾಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img