Wednesday, September 22, 2021
Homeಜಿಲ್ಲೆಬೆಂಗಳೂರುದ್ವಿತೀಯ ಪಿಯುಸಿ ಫಲಿತಾಂಶದಿಂದ 762 ವಿದ್ಯಾರ್ಥಿಗಳು ವಂಚಿತ..

ಇದೀಗ ಬಂದ ಸುದ್ದಿ

ದ್ವಿತೀಯ ಪಿಯುಸಿ ಫಲಿತಾಂಶದಿಂದ 762 ವಿದ್ಯಾರ್ಥಿಗಳು ವಂಚಿತ..

ಬೆಂಗಳೂರು: ರಾಜ್ಯದಲ್ಲಿ ಸಾಂಕ್ರಾಮಿಕ ಕೊರೊನಾ ಕಾರಣದಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿ, ಎಲ್ಲ ವಿದ್ಯಾರ್ಥಿಗಳನ್ನ ತೇರ್ಗಡೆಗೊಳ್ಳಿಸಲಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳ ಫಲಿತಾಂಶ ಜುಲೈ 20ರಂದು ಪ್ರಕಟಗೊಂಡಿತ್ತು. ಆದರೆ ಖಾಸಗಿ ಕಾಲೇಜುಗಳ ತಂತ್ರದಿಂದ ಬರೋಬ್ಬರಿ 762 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.

ಅಂದಹಾಗೆ ಈ 762 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಶುಲ್ಕ ಕಟ್ಟಿಲ್ಲ ಹಾಗೂ ಆನ್​ಲೈನ್​ ಶಾಲೆಗೆ ಹಾಜರಾಗಿಲ್ಲ ಎಂದು ಖಾಸಗಿ ಕಾಲೇಜುಗಳು ಪರೀಕ್ಷೆಗೆ ನೊಂದಣಿಯೇ ಮಾಡಿಲ್ಲ. ಹೀಗಾಗಿ, ಈ ವಿದ್ಯಾರ್ಥಿಗಳಿಗೆ ಫಲಿತಾಂಶ ಸಿಕ್ಕಿಲ್ಲ. ಆದರೆ ದಾಖಲಾತಿ ಆಧಾರದ ಮೇಲೆ ಇವರಿಗೆ ಹಾಲ್ ಟಿಕೆಟ್​ ಕಳಿಸಲಾಗಿತ್ತು‌.

ಪಿಯು ಬೋರ್ಡ್ ಮೊದಲು ಹಾಲ್ ಟಿಕೆಟ್ ನೀಡಿತ್ತು.‌ ಆದರೆ ಕಾಲೇಜುಗಳು ಪರೀಕ್ಷೆಗೆ ನೋಂದಣಿ ಮಾಡದೇ ಎಸ್ಎಸ್ಎಲ್​ಸಿ ಹಾಗೂ ಪಿಯು ಪ್ರಥಮ ವರ್ಷದ ಅಂಕ ಹಾಗೂ ಶೈಕ್ಷಣಿಕ ವರ್ಷದ ಹಾಜರಾತಿ ಅಂಕಗಳನ್ನ ನೀಡದ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡದೇ ಫೇಲ್ ಮಾಡಲಾಗಿದೆ‌.‌

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img