Friday, July 30, 2021
Homeಜಿಲ್ಲೆಬೆಂಗಳೂರುಯಡಿಯೂರಪ್ಪ ರಾಜೀನಾಮೆಗೆ ಟೈಮ್ ಫಿಕ್ಸ್

ಇದೀಗ ಬಂದ ಸುದ್ದಿ

ಯಡಿಯೂರಪ್ಪ ರಾಜೀನಾಮೆಗೆ ಟೈಮ್ ಫಿಕ್ಸ್

ಬೆಂಗಳೂರು : ಬಿಜೆಪಿ ಹೈಕಮಾಂಡ್ ಸೂಚನೆಯಂತೆ ತಾವು ನಡೆದುಕೊಳ್ಳೋದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಈ ಮೂಲಕ ತಮ್ಮ ರಾಜೀನಾಮೆ ಸುಳಿವನ್ನು ನೀಡಿದ್ದಾರೆ. ಇದರ ಬೆನ್ನಲ್ಲೆ, ಉನ್ನತ ಮೂಲಗಳಿಂದ ಯಡಿಯೂರಪ್ಪ ಅವರು ಜುಲೈ.26ರ ಬೆಳಿಗ್ಗೆ 11 ಗಂಟೆಗೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜುಲೈ 26 ರ ಬೆಳಿಗ್ಗೆ 11 ಗಂಟೆಗೆ ರಾಜೀನಾಮೆ ನೀಡಲಿದ್ದಾರೆ. ಈ ಕುರಿತಂತೆ ದೆಹಲಿಯ ಉನ್ನತ ಮೂಲಗಳು ಈ ವಿಷಯವನ್ನು ಖಚಿತಪಡಿಸಿವೆ. ಜುಲೈ 26 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಸಿಎಂ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.

ಜುಲೈ ಇಪ್ಪತ್ತೈದರಂದು ವರಿಷ್ಟರು ಅಧಿಕೃತ ಸೂಚನೆ ನೀಡಲಿದ್ದು ಇದರ ಸುಳಿವಿರುವ ಯಡಿಯೂರಪ್ಪ ರಾಜ್ಯಪಾಲರ ಭೇಟಿಗಾಗಿ ಸಮಯಾವಕಾಶ ಕೋರಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img