Friday, July 30, 2021
Homeಕೋವಿಡ್-19ಫ್ರಾನ್ಸ್‌ಗೆ ಅಪ್ಪಳಿಸಿದ 4 ನೇ ಕೋವಿಡ್ ಅಲೆ

ಇದೀಗ ಬಂದ ಸುದ್ದಿ

ಫ್ರಾನ್ಸ್‌ಗೆ ಅಪ್ಪಳಿಸಿದ 4 ನೇ ಕೋವಿಡ್ ಅಲೆ

ಪ್ಯಾರಿಸ್, ಜು.22: ಫ್ರಾನ್ಸ್‌ಗೆ ಕೋವಿಡ್‌ ನಾಲ್ಕನೇ ಅಲೆ ಅಪ್ಪಳಿಸಿದೆ. ಈ ನಡುವೇ ಫ್ರಾನ್ಸ್‌ನಲ್ಲಿ ವಿವಾದಾತ್ಮಕ ಲಸಿಕೆ ಪಾಸ್ಪೋರ್ಟ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಫ್ರೆಂಚ್ ಚಿತ್ರಮಂದಿರಗಳು, ವಸ್ತುಸಂಗ್ರಹಾಲಯಗಳು ಮತ್ತು ಕ್ರೀಡಾ ಸ್ಥಳಗಳು ಬುಧವಾರ ಸಂದರ್ಶಕರ ಬಳಿ ಕೋವಿಡ್‌ ಲಸಿಕೆ ಪಡೆದ ಪ್ರಮಾಣ ಪತ್ರ ಅಥವಾ ಕೋವಿಡ್‌ ನೆಗೆಟಿವ್‌ ವರದಿಯನ್ನು ಕೇಳಲು ಆರಂಭಿಸಿದೆ.

ಆಗಸ್ಟ್‌ನಿಂದ 50 ಕ್ಕೂ ಹೆಚ್ಚು ಜನರು ಸೇರುವ ರೆಸ್ಟೋರೆಂಟ್‌ಗಳು, ಕೆಫೆಗಳು ಮತ್ತು ಖರೀದಿ ಕೇಂದ್ರಗಳಿಗೆ

“ಹೆಲ್ತ್ ಪಾಸ್” ಎಂದು ಕರೆಯಲ್ಪಡುವ ಪಾಸ್‌ ಒಂದು ಅಗತ್ಯವಾಗಿದೆ. ಪ್ರಧಾನ ಮಂತ್ರಿ ಜೀನ್ ಕ್ಯಾಸ್ಟೆಕ್ಸ್ ಈ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಬಹುತೇಕ ಎಲ್ಲಾ ಹೊಸ ಸೋಂಕುಗಳು ರೋಗ ನಿರೋಧಕ ಶಕ್ತಿ ಹೊಂದಿರದ ಜನರಲ್ಲಿವೆ ಎಂದು ತಿಳಿಸಿದ್ದಾರೆ.

ಬುಧವಾರ ಫ್ರಾನ್ಸ್‌ನಲ್ಲಿ 21,000 ದಷ್ಟು ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ. ಇದು ಮೇ ಆರಂಭದ ನಂತರ ದಾಖಲಾದ ಅತೀ ಗರಿಷ್ಢದ ಪ್ರಕರಣಗಳಾಗಿದೆ. ಈ ಬೆನ್ನಲ್ಲೇ “ನಾವು ನಾಲ್ಕನೇ ತರಂಗದಲ್ಲಿದ್ದೇವೆ” ಎಂದು ಕ್ಯಾಸ್ಟೆಕ್ಸ್ ಟಿಎಫ್ 1 ಟೆಲಿವಿಷನ್‌ಗೆ ತಿಳಿಸಿದ್ದಾರೆ. ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ತಪ್ಪಿಸುವ ನಿಟ್ಟಿನಲ್ಲಿ ಆರೋಗ್ಯ ಪಾಸ್‌ ಅನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img