Friday, July 30, 2021
Homeಸುದ್ದಿ ಜಾಲಅಶ್ಲೀಲ ಚಿತ್ರ ನಿರ್ಮಾಣ: ರಾಜ್‌ ಕುಂದ್ರಾಗೆ ದಿನಕ್ಕೆ 7 ಲಕ್ಷ ರೂ. ಆದಾಯ!

ಇದೀಗ ಬಂದ ಸುದ್ದಿ

ಅಶ್ಲೀಲ ಚಿತ್ರ ನಿರ್ಮಾಣ: ರಾಜ್‌ ಕುಂದ್ರಾಗೆ ದಿನಕ್ಕೆ 7 ಲಕ್ಷ ರೂ. ಆದಾಯ!

ಮುಂಬೈ: ಅಶ್ಲೀಲ ಚಲನಚಿತ್ರಗಳನ್ನು ನಿರ್ಮಿಸುವ ಆರೋಪಕ್ಕೆ ಗುರಿಯಾಗಿ ಬಂಧಿತರಾಗಿರುವ ಉದ್ಯಮಿ ರಾಜ್‌ ಕುಂದ್ರಾ ಅವರಿಗೆ ಅಶ್ಲೀಲ ಚಿತ್ರಗಳ ವ್ಯಾಪಾರದಿಂದ ದಿನಕ್ಕೆ 7 ಲಕ್ಷ ರೂ. ಆದಾಯವಿತ್ತು ಎಂಬ ಹೊಸ ವಿಚಾರ ಬೆಳಕಿಗೆ ಬಂದಿದೆ.

ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಂಬೈನ ಸಹಾಯಕ ಪೊಲೀಸ್‌ ಆಯುಕ್ತ ಮಿಲಿಂದ್‌ ಭ್ರರಾಂಬೆ, ಕುಂದ್ರಾ ಅವರು ಕೇವಲ 18 ತಿಂಗಳ ಹಿಂದಷ್ಟೇ ಅಶ್ಲೀಲಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದರು. ಇವರ ಈ ವ್ಯಾಪಾರ ಲಾಕ್‌ಡೌನ್‌ ಅವಧಿಯಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿತ್ತು. ದಿನವೊಂದಕ್ಕೆ ಇವರ ಗಳಿಕೆ 7ರಿಂದ 8 ಲಕ್ಷ ರೂ. ಇತ್ತು ಎಂದು ತಿಳಿಸಿದ್ದಾರೆ.

ಇನ್ನು, ತನಿಖೆಯು ಪ್ರಗತಿಯಲ್ಲಿರುವಂತೆ, ಕುಂದ್ರಾ ಅಶ್ಲೀಲ ಸಿನಿಮಾಗಳನ್ನು, ಲಂಡನ್‌ನಲ್ಲಿರುವ ಕೆನ್ರಿನ್‌ ಎಂಬ ಕಂಪನಿಯೊಂದಕ್ಕಾಗಿ ಸೃಷ್ಟಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಈ ಕೆನ್ರಿನ್‌ ಕಂಪನಿಯ ಮಾಲಿಕ ಪ್ರದೀಪ್‌ ಭಕ್ಷಿ, ಕುಂದ್ರಾ ಅವರ ಭಾವ ಎನ್ನುವುದು ಇನ್ನೊಂದು ಆರೋಪ. ಈ ಸಂಸ್ಥೆ,ಕೆನ್ರಿನ್‌ ಹಾಟ್‌ಶಾಟ್ಸ್‌ ಎಂಬ ಆಯಪ್‌ ಹೊಂದಿದೆ. ಕುಂದ್ರಾ ತಯಾರಿಸುತ್ತಿದ್ದ ಅಶ್ಲೀಲ ಚಿತ್ರಗಳು, ಕೆನ್ರಿನ್‌ ಆಯಪ್‌ ಮತ್ತಿತರ ಆಯಪ್‌ ಗಳ ಮೂಲಕ ಬಿತ್ತರಗೊಳ್ಳುತ್ತಿದ್ದವು ಎನ್ನಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img