Thursday, July 29, 2021
Homeರಾಜಕೀಯಸಿಎಂ ಸ್ಥಾನಕ್ಕೆ ಯಾರನ್ನು ಶಿಫಾರಸು ಮಾಡಿಲ್ಲ: ಬಿಎಸ್​ವೈ

ಇದೀಗ ಬಂದ ಸುದ್ದಿ

ಸಿಎಂ ಸ್ಥಾನಕ್ಕೆ ಯಾರನ್ನು ಶಿಫಾರಸು ಮಾಡಿಲ್ಲ: ಬಿಎಸ್​ವೈ

ಬೆಂಗಳೂರು: ನಾನು ಯಾರನ್ನು ಸಿಎಂ ಮಾಡಬೇಕೆಂದು ಹೇಳುವುದಿಲ್ಲ. ಹೈಕಮಾಂಡ್ ಯಾವ ತೀರ್ಮಾನ ಬೇಕಾದರೂ ಮಾಡಲಿ. ಯಾವ ಸಮುದಾಯಕ್ಕೆ ನೀಡಬೇಕೆಂಬುದರ ಬಗ್ಗೆಯೂ ಮಾತನಾಡಲ್ಲ.ಯಾವುದೇ ಹೆಸರನ್ನು ನಾನು ಶಿಫಾರಸ್ಸು ಮಾಡುವುದಿಲ್ಲ ಎಂದು ಬಿಎಸ್​ವೈ ಹೇಳಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಬೆಳಿಗ್ಗೆ ಸುಳಿವು ನೀಡಿದ್ದ ಬಿಎಸ್​ವೈ, ಇದೀಗ ಮತ್ತೊಮ್ಮೆ ಅದೇ ವಿಚಾರವಾಗಿ ಮಾತನಾಡಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜುಲೈ 25ರಂದು ಹೈಕಮಾಂಡ್​ನಿಂದ ಸಂದೇಶ ಬರಬಹುದು, ಅದಕ್ಕಾಗಿ ಕಾಯುತ್ತಿದ್ದೇನೆ ಎಂದರು. ಜುಲೈ 26ಕ್ಕೆ ಬಿಜೆಪಿ ಸರ್ಕಾರ ಎರಡು ವರ್ಷಗಳ ಅವಧಿ ಪೂರ್ಣಗೊಳಿಸುತ್ತಿದ್ದು, ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಾಗೂ ನಮ್ಮ ಸಾಧನೆಗಳ ಬಗ್ಗೆ ಕೈಪಿಡಿ ಬಿಡುಗಡೆ ಮಾಡುತ್ತಿದ್ದೇವೆ ಎಂದರು.

ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಆದರೆ ಪಕ್ಷ ಸಂಘಟನೆ ಮಾಡಿ ಮುಂದೆಯೂ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು. ರಾಜ್ಯದಾದ್ಯಂತ ಸಂಚಾರ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎನ್ನುತ್ತಾ, ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ಬಿಟ್ಟುಕೊಟ್ಟರು.

ಸಚಿವ ಸಂಪುಟ ಸಭೆ ನಡೆಸುವುದಕ್ಕೂ ಮುಂಚಿತವಾಗಿ ಮಾತನಾಡಿರುವ ಅವರು, ಸಿಎಂ ಸ್ಥಾನಕ್ಕೆ ಇನ್ನು ಯಾವುದೇ ಹೆಸರು ಶಿಫಾರಸ್ಸು ಮಾಡಿಲ್ಲ. ನಾನು ಮಾಡುವುದಿಲ್ಲ. ಹೈಕಮಾಂಡ್​ನಿಂದ ಯಾವುದೇ ಸಂದೇಶ ಬಂದಿಲ್ಲ. ಜುಲೈ 25ರಂದು ಸಂದೇಶ ಬರಬಹುದು ಎಂದು ಕಾಯುತ್ತಿದ್ದೇನೆ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img