Thursday, July 29, 2021
Homeಸುದ್ದಿ ಜಾಲಮುಸ್ತಾಫಾ ರಾಜ್-ಪ್ರಿಯಾಮಣಿ ಮದುವೆ ಕಾನೂನುಬಾಹಿರ: ಕ್ರಿಮಿನಲ್​ ಕೇಸ್​ ದಾಖಲಿಸಿದ ಮೊದಲ ಪತ್ನಿ

ಇದೀಗ ಬಂದ ಸುದ್ದಿ

ಮುಸ್ತಾಫಾ ರಾಜ್-ಪ್ರಿಯಾಮಣಿ ಮದುವೆ ಕಾನೂನುಬಾಹಿರ: ಕ್ರಿಮಿನಲ್​ ಕೇಸ್​ ದಾಖಲಿಸಿದ ಮೊದಲ ಪತ್ನಿ

ನವದೆಹಲಿ: ಉದ್ಯಮಿ ಮುಸ್ತಫಾ ರಾಜ್ ಹಾಗೂ ನಟಿ ಪ್ರಿಯಾಮಣಿ ಮದುವೆ ಕಾನೂನು ಪ್ರಕಾರ ಅಸಿಂಧುವಾಗಿದ್ದು, ಈಗಲೂ ಅವರು ನನಗೆ ಗಂಡ ಎಂದು ಮೊದಲ ಪತ್ನಿ ಆಯೆಷಾ ಹೇಳಿದ್ದು, ಇಬ್ಬರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರೆ.

ಮುಸ್ತಾಫಾ ರಾಜ್​ ನನಗೆ ಈವರೆಗೆ ಕಾನೂನಾತ್ಮಕವಾಗಿ ವಿಚ್ಛೇದನ ನೀಡಿಲ್ಲ. ಹೀಗಾಗಿ ಈಗಲೂ ಅವರು ನನಗೆ ಗಂಡ. ಇದರ ಮಧ್ಯೆ ಪ್ರಿಯಾಮಣಿ ಜೊತೆ ಮದುವೆ ಮಾಡಿಕೊಂಡಿದ್ದು, ಅದು ಕಾನೂನು ಬಾಹಿರವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಮುಸ್ತಾಫಾ ಹಾಗೂ ಆಯೆಷಾ 2013ರಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಇದಾದ ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಮುಸ್ತಾಫಾ ಮೊದಲ ಪತ್ನಿಯಿಂದ ದೂರವಾಗಿ, 2017ರಲ್ಲಿ ಪ್ರಿಯಾಮಣಿ ಅವರನ್ನು ವರಿಸಿದ್ದರು.

ಮುಸ್ತಾಫಾ ಮತ್ತು ನಾನು ವಿಚ್ಛೇದನ ಪಡೆದುಕೊಳ್ಳಲು ಅರ್ಜಿ ಹಾಕಿಲ್ಲ. ಜತೆಗೆ ಪ್ರಿಯಾಮಣಿ ಜೊತೆ ಮದುವೆ ಮಾಡಿಕೊಳ್ಳುವ ಸಂದರ್ಭದಲ್ಲಿ ತಾವು ಬ್ಯಾಚುಲರ್ ಎಂದು ಕೋರ್ಟ್​ನಲ್ಲಿ ಹೇಳಿಕೊಂಡಿದ್ದಾರೆ ಎಂದು ಆಯೆಷಾ ಆರೋಪ ಮಾಡಿದ್ದಾರೆ. ತಮಗೆ ಎರಡು ಮಕ್ಕಳಿದ್ದು, ನಮ್ಮ ನಮ್ಮಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಿ ಇಷ್ಟು ದಿನ ಸುಮ್ಮನಿದ್ದೆ ಎಂದು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img