Friday, July 23, 2021
Homeಸುದ್ದಿ ಜಾಲಟಾಟಾಗೆ ಇಂದಿರಾ ಗಾಂಧಿ ಬರೆದ ವೈಯಕ್ತಿಕ ಪತ್ರ ಬಹಿರಂಗ!

ಇದೀಗ ಬಂದ ಸುದ್ದಿ

ಟಾಟಾಗೆ ಇಂದಿರಾ ಗಾಂಧಿ ಬರೆದ ವೈಯಕ್ತಿಕ ಪತ್ರ ಬಹಿರಂಗ!

ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಕೈಗಾರಿಕೋದ್ಯಮಿ ಜೆಆರ್‌ಡಿ ಟಾಟಾ ಅವರಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಂದಿರಾಗಾಂಧಿ ಅವರ ಸರಳತೆ ಹಾಗೂ ಸಂವಹನ ಕಲೆ, ಆಧುನಿಕತೆಯ ಭರಾಟೆಯ ನಡುವೆ ಮಾಯವಾಗುತ್ತಿರುವ ಪತ್ರ ಸಂಸ್ಕೃತಿ ಮತ್ತು ಮೌಲ್ಯದ ಬಗ್ಗೆ ಟ್ವಿಟಿಗರು ಚರ್ಚೆ ನಡೆಸುತ್ತಿದ್ದಾರೆ. ಜೆಆರ್‌ಡಿ ಟಾಟಾ ಅವರು ಭಾರತದ ಮೊಟ್ಟ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರಿಗೆ ಜುಲೈ 5, 1973ರಂದು ಈ ಪತ್ರವನ್ನು ಬರೆದಿದ್ದರು. ಈ ಪತ್ರದಲ್ಲಿ ಇಂದಿರಾ ಗಾಂಧಿ ಅವರು ಸುಗಂಧ ದ್ರವ್ಯದ ಬಗ್ಗೆ ತಮಗಿರುವ ಜ್ಞಾನದ ಕುರಿತು ಮಾತನಾಡಿದ್ದಾರೆ. 

ಪತ್ರವು ಟೈಪ್‍ರೈಟಿಂಗ್‍ನಲ್ಲಿದ್ದು, ಸುಗಂಧ ದ್ರವ್ಯವನ್ನು ಕೊಡುಗೆಯಾಗಿ ಕಳುಹಿಸಿದ ಟಾಟಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ನನಗೆ ಫ್ಯಾಷನ್ ಜಗತ್ತಿನ ಬಗ್ಗೆ ಅಷ್ಟಾಗಿ ತಿಳಿದಿಲ್ಲ ಎಂದು ಹೇಳಿದ್ದಾರೆ. ಸುಗಂಧ ದ್ರವ್ಯದ ಬಗ್ಗೆ ನನಗೆ ನಿಜವಾಗಿಯೂ ಅಚ್ಚರಿ ಇದೆ. ಸುಗಂಧ ದ್ರವ್ಯ ಕಳುಹಿಸಿರುವುದಕ್ಕೆ ಧನ್ಯವಾದಗಳು. ಸಾಮಾನ್ಯವಾಗಿ ನನಗೆ ಇದನ್ನು ಬಳಕೆ ಮಾಡಲು ತಿಳಿದಿಲ್ಲ. ನಾನು ಫ್ಯಾಶನ್ ಪ್ರಪಂಚದಿಂದ ದೂರ ಉಳಿದಿದ್ದೇನೆ. ಹಾಗಾಗಿ ನನಗೆ ಇದರ ಬಗ್ಗೆ ತಿಳಿದಿಲ್ಲ. ಆದರೆ ಖಂಡಿತವಾಗಿಯೂ ಪ್ರಯೋಗ ಮಾಡುತ್ತೇವೆ ಎಂದು ಹೇಳಿದ್ದಾರೆ.

ನಿಮ್ಮನ್ನು ನೋಡಲು ಹರ್ಷಿಸುತ್ತೇನೆ. ನೀವು ಯಾವುದೇ ಅಭಿಪ್ರಾಯಗಳನ್ನು ತಿಳಿಸಲು ಬಯಸಿದಾಗ ದಯವಿಟ್ಟು ಬರೆಯಲು ಅಥವಾ ನನ್ನನ್ನು ನೋಡಲು ಹಿಂಜರಿಯಬೇಡಿ ಎಂದೂ ಬರೆದಿದ್ದರು. ಟಾಟಾ ಹಾಗೂ ಅವರ ಪತ್ನಿಗೆ ಶುಭಾಶಯಗಳನ್ನು ತಿಳಿಸುವುದರ ಮೂಲಕ ಪತ್ರವು ಕೊನೆಯಾಗಿದೆ. ಪತ್ರವನ್ನು ಕೈಗಾರಿಕೋದ್ಯಮಿ ಹರ್ಷ ಗೋಯಾಂಕ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಕೈಗಾರಿಕೋದ್ಯಮಿ ಹಾಗೂ ಪ್ರಧಾನ ಮಂತ್ರಿ ನಡುವಿನ ತುಂಬಾ ವೈಯಕ್ತಿಕವಾದ ಪತ್ರವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಶೀರ್ ಕ್ಲಾಸ್ ! #ಟಾಟಾ ಎಂದು ಟ್ವೀಟ್ ಮಾಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img