Thursday, July 29, 2021
Homeಸುದ್ದಿ ಜಾಲನಾನು ಬ್ರಾಹ್ಮಣ ಎಂದಿದ್ದೇ ತಪ್ಪಾಯ್ತು:ಸುರೇಶ್‌ ರೈನಾ

ಇದೀಗ ಬಂದ ಸುದ್ದಿ

ನಾನು ಬ್ರಾಹ್ಮಣ ಎಂದಿದ್ದೇ ತಪ್ಪಾಯ್ತು:ಸುರೇಶ್‌ ರೈನಾ

ಭಾರತದ ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ. ರೈನಾ ಆಡಿದ ಮಾತಿನಿಂದ ಸಿಟ್ಟಾದ ನೆಟ್ಟಿಗರು, ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಇಷ್ಟಕ್ಕೂ ಆಗಿದ್ದೇನು? ಸುರೇಶ್‌ ಹೇಳಿದ್ದಾದ್ರು ಏನು?

ವಾಸ್ತವವಾಗಿ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಆಡಿದ ರೈನಾ, ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್)ನ 5ನೇ ಋತುವಿನಲ್ಲಿ ವ್ಯಾಖ್ಯಾನ ಮಾಡುತ್ತಿದ್ದರು. ಈ ಸಮಯದಲ್ಲಿ ಅವ್ರ ಸಹ ನಿರೂಪಕ ರೈನಾ ಅವರಿಗೆ ದಕ್ಷಿಣ ಭಾರತದ ಸಂಸ್ಕೃತಿಯನ್ನ ಅಳವಡಿಸಿಕೊಳ್ಳುವ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಸಹಜವಾಗಿ ರೈನಾ ನೀಡಿದ ಹೇಳಿಕೆ ಇದೀಗ ಜಾತಿಯ ಸ್ವರೂಪ ಪಡೆದು, ಜಾಲತಾಣದಲ್ಲಿ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ರೈನಾ ವಿರುದ್ಧ ಟೀಕೆಗಳ ಸುರಿಮಳೆಯೇ ಶುರುವಾಗಿಬಿಟ್ಟಿದೆ.

ಅಂದ್ಹಾಗೆ, ಸುರೇಶ್‌ ರೈನಾ, ನಾನು 2004ರಿಂದ ಚೆನ್ನೈನಲ್ಲಿ ಆಡುತ್ತಿದ್ದೇನೆ. ನಾನೊಬ್ಬ ಬ್ರಾಹ್ಮಣನಾದ ಕಾರಣ, ಇಲ್ಲಿನ ಸಂಸ್ಕೃತಿಯನ್ನ ಬೇಗನೇ ಅರಿಯಲು ಸಾಧ್ಯವಾಗಿದೆ. ನಾನು ದಕ್ಷಿಣ ಭಾರತದ ಸಂಸ್ಕೃತಿಯನ್ನ ಪ್ರೀತಿಸುತ್ತೇನೆ. ಇನ್ನು ಅನಿರುದ್ಧ್ ಶ್ರೀಕಾಂತ್, ಸುಬ್ರಮಣ್ಯಂ ಬದ್ರಿನಾಥ್, ಲಕ್ಷ್ಮಿಪತಿ ಬಾಲಾಜಿ ಅವರೊಂದಿಗೆ ಆಡಿದ್ದೇನೆ. ನಾನು 2008 ರಿಂದ ಸಿಎಸ್‌ಕೆ ಭಾಗವಾಗಿದ್ದೇನೆ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img