Friday, July 30, 2021
Homeಜಿಲ್ಲೆಬೆಂಗಳೂರುCM ಮನೆಗೆ ಮುಂದುವರಿದ ಶ್ರೀಗಳ ಭೇಟಿ

ಇದೀಗ ಬಂದ ಸುದ್ದಿ

CM ಮನೆಗೆ ಮುಂದುವರಿದ ಶ್ರೀಗಳ ಭೇಟಿ

ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆ ಸುದ್ದಿಗಳ ನಡುವೆಯೇ ಎಲ್ಲರ ದೃಷ್ಟಿ ‘ದಿಲ್ಲಿ ನಿರ್ಧಾರ’ ದತ್ತ ನೆಟ್ಟಿದೆ. ಈ ಮಧ್ಯೆ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಯಡಿಯೂರಪ್ಪ, ಯಾರೂ ತಮ್ಮ ಪರವಾಗಿ ಹೇಳಿಕೆ ನೀಡಬಾರದು, ಪ್ರತಿಭಟನೆ ನಡೆಸಬಾರದು ಎಂದಿದ್ದಾರೆ. ಬುಧವಾರವೂ ಅವರ ನಿವಾಸಕ್ಕೆ ಸಿದ್ಧಗಂಗಾ ಮಠದ ಶ್ರೀಗಳ ಸಹಿತ 30ಕ್ಕೂ ಹೆಚ್ಚು ಸ್ವಾಮೀಜಿಗಳು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಯಾರೂ ತಮ್ಮ ಪರವಾಗಿ ಹೇಳಿಕೆ ಕೊಡುವುದಾಗಲಿ, ಪ್ರತಿಭಟನೆ ನಡೆಸುವುದಾಗಲಿ ಮಾಡಬಾರದು ಎಂದು ವಿನಂತಿಸಿಕೊಳ್ಳುತ್ತೇನೆ’ ಎಂದು ಹೇಳಿರುವ ಮುಖ್ಯಮಂತ್ರಿ, ‘ಅಭಿಮಾನವು ಶಿಸ್ತಿನ ವ್ಯಾಪ್ತಿ ಮೀರಬಾರದು. ಪಕ್ಷ ನನಗೆ ಮಾತೃ ಸಮಾನ, ಅದರ ಗೌರವಕ್ಕೆ ಚ್ಯುತಿತರುವ ಘಟನೆಗಳು ನನಗೆ ಅತೀವ ನೋವು ತರುತ್ತವೆ. ನಿಜವಾದ ಹಿತೈಷಿಗಳು ನನ್ನ ಭಾವನೆಗಳಿಗೆ ಸ್ಪಂದಿಸುತ್ತಾರೆ ಎಂದು ನಂಬಿರುವೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಮುಖ್ಯಮಂತ್ರಿ ನಿವಾಸಕ್ಕೆ ಶ್ರೀಗಳ ಭೇಟಿ ಒಂದೆಡೆಯಾದರೆ, ಮತ್ತೂಂದೆಡೆ ಸಚಿವರು, ಶಾಸಕರು ಅತ್ತ ಸುಳಿಯದೆ ಇರುವುದು ಕುತೂಹಲ ಕೆರಳಿಸಿದೆ. ಬೆಂಬಲ ವ್ಯಕ್ತಪಡಿಸಿದರೆ ವರಿಷ್ಠರ ಕಣ್ಣಿಗೆ ಬೀಳುತ್ತೇವೆ ಎಂಬ ಕಾರಣದಿಂದ ದೂರ ಸರಿದಿದ್ದಾರೆ ಎನ್ನಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img