Friday, July 23, 2021
Homeಜಿಲ್ಲೆಸಿಎಂ ರೇಸ್​​ನಲ್ಲಿ ಹಲವರ ಹೆಸರು

ಇದೀಗ ಬಂದ ಸುದ್ದಿ

ಸಿಎಂ ರೇಸ್​​ನಲ್ಲಿ ಹಲವರ ಹೆಸರು

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವನ್ನು ಬಿ.ಎಸ್. ಯಡಿಯೂರಪ್ಪ ನೀಡುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ಸ್ಥಾನದ ರೇಸ್​ನಲ್ಲಿ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್​, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರ ಹೆಸರುಗಳು ಕೇಳಿ ಬರುತ್ತಿವೆ.

ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ತಮ್ಮ ರಾಜೀನಾಮೆಯ ಸುಳಿವನ್ನು ನೀಡಿದ್ದಾರೆ.  ಈಗಾಗಲೇ ಅವರು ರಾಜೀನಾಮೆ ನೀಡುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದೀಗ ಅಧಿಕೃತವಾಗುವ ಸೂಚನೆ ಕಂಡು ಬಂದ ಹಿನ್ನೆಲೆ ಆಕಾಂಕ್ಷಿಗಳ ನಿರೀಕ್ಷೆಗಳು ಗರಿಗೆದರಿವೆ.

ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಬಿಜೆಪಿ ಕೇಂದ್ರ ಸಚಿವರು, ಸಂಸದರು, ರಾಷ್ಟ್ರೀಯ ಮುಖಂಡರು ಹಾಗೂ ಯಡಿಯೂರಪ್ಪ ಸಂಪುಟದ ಸದಸ್ಯರು ಹಾಗೂ ಕೆಲ ಶಾಸಕರು ಸೇರಿದಂತೆ ಹತ್ತಕ್ಕು ಹೆಚ್ಚು ಆಕಾಂಕ್ಷಿಗಳ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬರುತ್ತಿದೆ.

ಜುಲೈ 26ಕ್ಕೆ ತಮ್ಮ ಅಧಿಕಾರ ಅವಧಿಯ 2ನೇ ವರ್ಷ ಪೂರ್ಣಗೊಳಿಸಿರುವ ಬಿ. ಎಸ್. ಯಡಿಯೂರಪ್ಪ ಅಂದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ಇದೆ. 2023ಕ್ಕೆ ನಡೆಯುವ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಒಂದು ವರ್ಷ ಹತ್ತು ತಿಂಗಳು ಕಾಲಾವಧಿ ಇರುವ ಹಿನ್ನೆಲೆ ಮುಂಬರುವ ಚುನಾವಣೆಗಳನ್ನೂ ಪ್ರಮುಖವಾಗಿ ಪರಿಗಣಿಸಿಕೊಂಡು ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆಯನ್ನು ಹೈಕಮಾಂಡ್ ಮಾಡಬೇಕಿದೆ. ಅತ್ಯಂತ ಮಹತ್ವದ ಸವಾಲು ಪಕ್ಷದ ಹೈಕಮಾಂಡ್ ನಾಯಕರ ಮೇಲೆ ಇದ್ದು, ಯಾರನ್ನ ಮುಖ್ಯಮಂತ್ರಿಯಾಗಿಸುತ್ತಾರೆ ಎಂಬ ಕುತೂಹಲಕ್ಕೆ ಇದುವರೆಗೂ ಉತ್ತರ ಸಿಕ್ಕಿಲ್ಲ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img