Thursday, July 29, 2021
Homeರಾಜಕೀಯಸಿಎಂ ನಿವಾಸಕ್ಕೆ ದೌಡಾಯಿಸಿದ ಸಚಿವರು.!

ಇದೀಗ ಬಂದ ಸುದ್ದಿ

ಸಿಎಂ ನಿವಾಸಕ್ಕೆ ದೌಡಾಯಿಸಿದ ಸಚಿವರು.!

ಬೆಂಗಳೂರು : ಬಿಜೆಪಿ ಹೈಕಮಾಂಡ್ ಯಾವ ಸಂದೇಶ ನೀಡುತ್ತದೋ ಅದಕ್ಕೆ ನಾನು ಬದ್ಧನಾಗಿದ್ದೇನೆ. ಬಿಜೆಪಿಯಲ್ಲಿ ಇದುವರೆಗೆ ಯಾವುದೇ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ನೀಡಿಲ್ಲ. ಅಂತದ್ದರಲ್ಲಿ ನನಗೆ ನೀಡಲಾಗಿದೆ. ಹೀಗಾಗಿ ಹೈಕಮಾಂಡ್ ಆದೇಶದಂತೆ ಪಾಲನೆ ಮಾಡುತ್ತೇನೆ ಎಂಬುದಾಗಿ ಸಿಎಂ ಯಡಿಯೂರಪ್ಪ ರಾಜೀನಾಮೆ ಸುಳಿವು ನೀಡುತ್ತಿದ್ದಂತೇ, ಸಿಎಂ ನಿವಾಸ, ಈಗ ರಾಜಕೀಯ ಕೇಂದ್ರ ಬಿಂದುವಾಗಿದೆ. ಅಲ್ಲದೇ ಸಿಎಂ ನಿವಾಸಕ್ಕೆ ಅನೇಕ ಸಚಿವರು ದೌಡಾಯಿಸಿದ್ದಾರೆ.

ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯ ಬಗ್ಗೆ ಸುಳಿವು ನೀಡುತ್ತಿದ್ದಂತೆ, ನೂತನ ಸಿಎಂ ಅಧಿಕಾರ ವಹಿಸಿಕೊಂಡ ಮೇಲೆ ಸಚಿವ ಸಂಪುಟ ಪುನಾರಚನೆ ಭೀತಿ ಶುರುವಾಗಿದೆ. ಇದೇ ಕಾರಣದಿಂದಾಗಿ ಸಿಎಂ ಅಧಿಕೃತ ನಿವಾಸ ಕಾವೇರಿ, ರಾಜ್ಯ ರಾಜಕಾರಣದ ಪ್ರಮುಖ ಕೇಂದ್ರ ಬಿಂದುವಾಗಿದೆ.

ಇಂದು ಸಿಎಂ ರಾಜೀನಾಮೆ ಸುಳಿವು ನೀಡಿ ಮಾತನಾಡುತ್ತಿದ್ದಂತೆ ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್ ಸೇರಿದಂತೆ ಅನೇಕ ಸಚಿವರು, ಶಾಸಕರು ಸಿಎಂ ಭೇಟಿಯಾಗಿ, ಮಾತುಕತೆ ನಡೆಸಿದರು.

ಇವರಲ್ಲದೇ ಬಾಂಬೆ ಮಿತ್ರಮಂಡಳಿಯ ತಂಡದ ಸಚಿವರಾದಂತ ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್ ಕೂಡ ಸಿಎಂ ಗೃಹಕಚೇರಿ ಕೃಷ್ಣಾಗೆ ಆಗಮಿಸಿ, ತಮ್ಮ ಮುಂದಿನ ಭವಿಷ್ಯದ ಬಗ್ಗೆ ಆಂತಕವನ್ನು ಯಡಿಯೂರಪ್ಪ ಮುಂದೆ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ. ಜುಲೈ.26ರಂದು ಈ ಬೆಳವಣಿಗೆಗೆ ತೆರೆ ಬೀಳಲಿದೆ ಎನ್ನಲಾಗುತ್ತಿದ್ದು, ಅಲ್ಲಿಯವರೆಗೆ ಕಾದು ನೋಡಬೇಕಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img