Friday, July 23, 2021
Homeರಾಜಕೀಯಸಿಎಂ ಬದಲಾವಣೆ ಚರ್ಚೆ : ಬಿಎಸ್ ವೈ ಪುತ್ರ ಹೇಳಿದ್ದೇನು?

ಇದೀಗ ಬಂದ ಸುದ್ದಿ

ಸಿಎಂ ಬದಲಾವಣೆ ಚರ್ಚೆ : ಬಿಎಸ್ ವೈ ಪುತ್ರ ಹೇಳಿದ್ದೇನು?

ಶಿವಮೊಗ್ಗ : ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದ ಕುರಿತಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ಹಾಗೂ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದು, ಸಿಎಂ ಬದಲಾವಣೆ ಸುದ್ದಿ ಕೇವಲ ಊಹಾಪೋಹ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸುದ್ದಿ ಊಹಾಪೋಹ. ಯಡಿಯೂರಪ್ಪ ಅವರು ತಳಮಟ್ಟದಿಂದ ಬಿಜೆಪಿ ಪಕ್ಷ ಕಟ್ಟಿದ್ದಾರೆ. ಕೆಲವರ ಹೇಳಿಕೆಗಳಿಂದ ಪಕ್ಷಕ್ಕೆ ನಷ್ಟವಾಗುತ್ತಿದೆ. ಪಕ್ಷದ ವರಿಷ್ಠರು ಎಲ್ಲವನ್ನೂ ಸರಿ ಮಾಡುತ್ತಾರೆ. ಎಲ್ಲ ವರ್ಗದ ಮಠಾಧೀಶರೂ ಯಡಿಯೂರಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಅವರು ಮುಂದಿನ ದಿನಗಳಲ್ಲಿಯೂ ಒಳ್ಳೆಯ ರೀತಿ ಆಡಳಿತ ನೀಡಲಿದ್ದಾರೆ. ಯಡಿಯೂರಪ್ಪ ಅವರು ಸ್ವಾಮೀಜಿಗಳ ಆಶೀರ್ವಾದ, ಸಂಘಟನೆ ಆಶೀರ್ವಾದದಿಂದ ಬೆಳೆದಿದ್ದಾರೆ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img