Thursday, July 29, 2021
Homeಸುದ್ದಿ ಜಾಲಭಾರಿ ಮಳೆ ಮತ್ತು ಪ್ರವಾಹದಿಂದ ನಲುಗುತ್ತಿರುವ ಚೀನಾ : 33 ಮಂದಿ ಸಾವು

ಇದೀಗ ಬಂದ ಸುದ್ದಿ

ಭಾರಿ ಮಳೆ ಮತ್ತು ಪ್ರವಾಹದಿಂದ ನಲುಗುತ್ತಿರುವ ಚೀನಾ : 33 ಮಂದಿ ಸಾವು

ಚೀನಾದಲ್ಲಿ ವಾರದಿಂದ ಸುರಿಯುತ್ತಿರುವ ಭಾರೀ ಮಳೆ, ಪ್ರವಾಹ ಸೃಷ್ಟಿಸಿದ್ದು, ಇಲ್ಲಿಯವರೆಗೆ 33 ಜನರನ್ನ ಬಲಿ ತೆಗೆದುಕೊಂಡಿದೆ. ಇನ್ನೂ ಹಲವರು ಇನ್ನೂ ಕಾಣೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ಗುರುವಾರ ವರದಿ ಮಾಡಿವೆ. ಇನ್ನು ಮಧ್ಯ ಚೀನಾದ ಅತ್ಯಂತ ಜನನಿಬಿಡ ಪ್ರಾಂತ್ಯಗಳಲ್ಲಿ ಒಂದಾದ ಹೆನಾನ್ʼನ ಪ್ರವಾಹ ಪೀಡಿತ ಪ್ರಾಂತ್ಯದಿಂದ ಸಾವಿರಾರು ಜನರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ವರದಿಯಾಗಿದೆ. ಈ ಪ್ರವಾಹದಿಂದ ಪ್ರಮುಖ ಪ್ರದೇಶಗಳು ಮುಳುಗಿದ್ದು, ಬೆಳೆಗಳು ನಾಶಗೊಂಡಿವೆ.

ಹೆನಾನ್ ಪ್ರಾಂತ್ಯಕ್ಕೆ ಬೆದರಿಕೆ ಒಡ್ಡಿರುವ ಪ್ರವಾಹದ ನೀರನ್ನ ಬಿಡುಗಡೆ ಮಾಡಲು ಚೀನಾದ ಮಿಲಿಟರಿ ಅಣೆಕಟ್ಟು ತೆರೆದಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಇನ್ನು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಚೀನಾದಲ್ಲಿ ಉಂಟಾದ ಪ್ರವಾಹದಿಂದ ಇಲ್ಲಿಯವರೆಗೆ 1.22 ಬಿಲಿಯನ್ ಯುವಾನ್ (189 ಮಿಲಿಯನ್ ಡಾಲರ್) ಮೌಲ್ಯದ ನೇರ ಆರ್ಥಿಕ ನಷ್ಟವಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪ್ರಾಂತೀಯ ರಾಜಧಾನಿ ಝೆಂಗ್ಝೌನ ಉತ್ತರಕ್ಕಿರುವ ಕ್ಸಿನ್ ಕ್ಸಿಯಾಂಗ್ ಎಂಬ ಸಣ್ಣ ನಗರದಲ್ಲಿ ಭಾರಿ ಮಳೆಯಿಂದ ಬುಧವಾರದ ಅಂತ್ಯದ ವೇಳೆಗೆ 470,000 ಕ್ಕೂ ಹೆಚ್ಚು ಜನರು ಮತ್ತು 55,000 ಹೆಕ್ಟೇರ್ ಗೂ ಹೆಚ್ಚು ಬೆಳೆಗಳು ಬಾಧಿತವಾಗಿವೆ ಎಂದು ಕ್ಸಿನ್ಹುವಾ ತಿಳಿಸಿದೆ. ಶೋಧ ಮತ್ತು ರಕ್ಷಣಾ ತಂಡದ ಭಾಗವಾದ 26,000ಕ್ಕೂ ಹೆಚ್ಚು ಸಿಬ್ಬಂದಿಯನ್ನ ಸ್ಥಳೀಯ ಸರ್ಕಾರ ನಿಯೋಜಿಸಿದೆ ಎಂದು ವರದಿಯಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img