Thursday, July 29, 2021
Homeಜಿಲ್ಲೆದಕ್ಷಿಣ ಕನ್ನಡಮಳೆಯ ಆರ್ಭಟಕ್ಕೆ ಕುಸಿದ ಬೆಂಗಳೂರು-ಮಂಗಳೂರು ರಸ್ತೆ

ಇದೀಗ ಬಂದ ಸುದ್ದಿ

ಮಳೆಯ ಆರ್ಭಟಕ್ಕೆ ಕುಸಿದ ಬೆಂಗಳೂರು-ಮಂಗಳೂರು ರಸ್ತೆ

ದಕ್ಷಿಣ ಕನ್ನಡ: ರಾಜ್ಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಲ್ ಎಂಬಲ್ಲಿ ರಸ್ತೆ ಕುಸಿತ ಉಂಟಾಗಿದ್ದು, ಸಂಚಾರಕ್ಕೆ ತೊಡಕಾಗಿದೆ.

ಸಕಲೇಶಪುರ ಸಮೀಪದ ದೋಣಿಗಲ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿಯುತ್ತಿದ್ದು, ಮಂಗಳೂರಿನಿಂದ ಗುಂಡ್ಯ ಮಾರ್ಗವಾಗಿ ಬೆಂಗಳೂರು ಸಂಚಾರಕ್ಕೆ ತಡೆ ಉಂಟಾಗಿದೆ. ಪ್ರಸ್ತುತ ಗುಂಡ್ಯ ಚೆಕ್​ಪೋಸ್ಟ್​ನಲ್ಲಿ ವಾಹನಗಳನ್ನು ತಡೆ ಹಿಡಿಯಲಾಗಿದ್ದು, ಬದಲಿ ಮಾರ್ಗವಾಗಿ ಸಂಚರಿಸುವ ಸ್ಥಿತಿ ಇದೆ.

ಮಡಿಕೇರಿ – ಸಂಪಾಜೆ ರಸ್ತೆಯೂ ಪೂರ್ಣ ಪ್ರಮಾಣದಲ್ಲಿ ಸರಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನುಳಿದಂತೆ ಚಾರ್ಮಾಡಿ ಘಾಟ್ ಮೂಲಕ ಹೆಚ್ಚಿನ ವಾಹನಗಳು ಸಂಚಾರ ಮಾಡಿದಲ್ಲಿ ವಾಹನ ದಟ್ಟಣೆ ಎದುರಾಗಿ, ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img