Sunday, August 1, 2021
Homeಬೆಂಗಳೂರುಗಾಂಜಾ ನಶೆಯಲ್ಲಿ ವಾಹನಗಳ ಗಾಜು ಪುಡಿ ಮಾಡಿದ ಪುಂಡರು

ಇದೀಗ ಬಂದ ಸುದ್ದಿ

ಗಾಂಜಾ ನಶೆಯಲ್ಲಿ ವಾಹನಗಳ ಗಾಜು ಪುಡಿ ಮಾಡಿದ ಪುಂಡರು

ಬೆಂಗಳೂರು: ನಗರದಲ್ಲಿ ಪುಂಡರು ರಾತ್ರೋರಾತ್ರಿ ಅಟ್ಟಹಾಸ ಮೆರೆದಿದ್ದಾರೆ. ಗಾಂಜಾ ನಶೆಯಲ್ಲಿದ್ದ ಮೂವರು ಪುಂಡರು ವಾಹನಗಳ ಗಾಜುಗಳನ್ನು ಪುಡಿ ಮಾಡಿ ಪರಾರಿಯಾಗಿರುವ ಘಟನೆ ವಿಜಯನಗರದ ಆರ್.ಪಿ.ಸಿ ಲೇಔಟ್​ನಲ್ಲಿ ತಡರಾತ್ರಿ ನಡೆದಿದೆ.

ವಿಜಯನಗರದ RPC ಲೇಔಟ್​ನವರೇ ಆದ ಈ ಮೂವರು, ರಸ್ತೆ ಬದಿ ಸಾಲಾಗಿ ನಿಲ್ಲಿಸಿದ್ದ ಐದಕ್ಕೂ ಹೆಚ್ಚು ವಾಹನಗಳ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ಏರಿಯಾದಲ್ಲಿದ್ದ ಸಿಸಿಟಿವಿಯಲ್ಲಿ ಪುಂಡರ ದುಷ್ಕೃತ್ಯ ಸೆರೆಯಾಗಿದೆ.

ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ವಿಜಯನಗರ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ವಿಜಯನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img