Sunday, August 1, 2021
Homeಜಿಲ್ಲೆಮೈಸೂರುಯಡಿಯೂರಪ್ಪ ಅವರ ನಾಲಿಗೆ ಮಗನ ಕೈಯಲ್ಲಿದೆ :ಹೆಚ್ ವಿಶ್ವನಾಥ್

ಇದೀಗ ಬಂದ ಸುದ್ದಿ

ಯಡಿಯೂರಪ್ಪ ಅವರ ನಾಲಿಗೆ ಮಗನ ಕೈಯಲ್ಲಿದೆ :ಹೆಚ್ ವಿಶ್ವನಾಥ್

ಮೈಸೂರು :‌ ಸಿಎಂ ಯಡಿಯೂರಪ್ಪ ಅವರ ಕೈ ಮತ್ತು ನಾಲಿಗೆ ಅವರ ಮಗನ ಕೈಯಲ್ಲಿದೆ. ಆದ್ದರಿಂದ ಬಿಎಸ್​ವೈ ಗೌರವಯುತವಾಗಿ ಪದವಿಯನ್ನು ಬಿಡಬೇಕು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾಮೀಜಿಗಳು ಸಂವಿಧಾನಕ್ಕಿಂತ ದೊಡ್ಡವರಲ್ಲ. ಸಂವಿಧಾನವೇ ಸಾರ್ವಭೌಮ. ಸ್ವಾಮೀಜಿಗಳು ನಾವೇ ಸಾರ್ವಭೌಮರು ಎಂದು ಹೋಗುವುದು ಸರಿಯಲ್ಲ. ಬಿಎಸ್​ವೈ ಅವರ ಬದಲಾವಣೆಗೆ ಮುಖ್ಯ ಕಾರಣ‌ ಭ್ರಷ್ಟಾಚಾರ ಎಂದು ಆರೋಪಿಸಿದರು.

ಯಾವುದೇ ಸ್ವಾಮೀಜಿಗಳು ಸಿಎಂ ಇವರೇ ಮುಂದುವರೆಯಬೇಕು ಎಂದು ಹೇಳುವುದು ಸರಿಯಲ್ಲ‌. ಒಂದು ಧರ್ಮದ ಸ್ವಾಮೀಜಿಗಳು ರಾಜಕಾರಣ ಮಾಡಬಾರದು. ಧರ್ಮದಲ್ಲಿ ರಾಜಕಾರಣ ಇರಬಾರದು. ಆದರೆ, ಈಗ ಧರ್ಮದಲ್ಲೇ ರಾಜಕಾರಣ ನೋಡುವ ಸ್ಥಿತಿ ಬಂದಿದೆ ಎಂದು ಸ್ವಾಮೀಜಿಗಳ ನಡವಳಿಕೆಗಳನ್ನು ಟೀಕಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img