Friday, July 30, 2021
Homeಸುದ್ದಿ ಜಾಲಕೇಂದ್ರ ಸಚಿವೆ ಸ್ಮೃತಿ ವಿರುದ್ಧ ಫೇಸ್​ಬುಕ್​ನಲ್ಲಿ ಅಶ್ಲೀಲ ಬರಹ..

ಇದೀಗ ಬಂದ ಸುದ್ದಿ

ಕೇಂದ್ರ ಸಚಿವೆ ಸ್ಮೃತಿ ವಿರುದ್ಧ ಫೇಸ್​ಬುಕ್​ನಲ್ಲಿ ಅಶ್ಲೀಲ ಬರಹ..

ಫಿರೋಜಾಬಾದ್​(ಉತ್ತರ ಪ್ರದೇಶ): ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ಅಶ್ಲೀಲವಾಗಿ ಬರೆದಿರುವ ಆರೋಪದ ಮೇಲೆ ಪ್ರಾಧ್ಯಾಪಕನೋರ್ವನನ್ನು ಬಂಧಿಸಲಾಗಿದೆ. ಶಹರ್ಯಾರ್ ಅಲಿ ಎಂಬಾತ ಬಂಧಿತ ಆರೋಪಿ.

ಫಿರೋಜಾಬಾದ್​ನಲ್ಲಿರುವ ಎಸ್​ಆರ್​ಕೆ ಕಾಲೇಜ್​ನಲ್ಲಿ ಶಹರ್ಯಾರ್ ಅಲಿ ಇತಿಹಾಸ ವಿಭಾಗದ ಪ್ರೊಫೆಸರ್​ ಆಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಮಾರ್ಚ್​ ತಿಂಗಳಲ್ಲಿ ಫೇಸ್​ಬುಕ್​​ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ವಿರುದ್ಧ ಅಶ್ಲೀಲವಾಗಿ ಬರೆದುಕೊಂಡಿದ್ದಾರೆ.ಹೀಗಾಗಿ ಅವರ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಕೋರ್ಟ್​ಗೆ ಶರಣಾಗಿರುವ ಅವರನ್ನ ಪೊಲೀಸರ ವಶಕ್ಕೆ ನೀಡಲಾಗಿದೆ.

ತಮಗೆ ಜಾಮೀನು ನೀಡುವಂತೆ ಶಹರ್ಯಾರ್ ಅಲಿ ಕೋರ್ಟ್​ನಲ್ಲಿ ಮನವಿ ಮಾಡಿದ್ದರು. ಆದರೆ ಅದನ್ನ ತಿರಸ್ಕರಿಸಿರುವ ನ್ಯಾಯಾಲಯ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಸುಪ್ರೀಂಕೋರ್ಟ್ ಕೂಡ ಜಾಮೀನು ಅರ್ಜಿ ತಳ್ಳಿ ಹಾಕಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img