Thursday, July 29, 2021
Homeಜಿಲ್ಲೆಬೆಂಗಳೂರುನಾಳೆ SSLCಯ ಕೊನೆಯ ಪರೀಕ್ಷೆ

ಇದೀಗ ಬಂದ ಸುದ್ದಿ

ನಾಳೆ SSLCಯ ಕೊನೆಯ ಪರೀಕ್ಷೆ

ಬೆಂಗಳೂರು : ಕೊರೊನಾ ಸಾಂಕ್ರಾಮಿಕ ರೋಗದ ಕಾರಣಕ್ಕೆ ಎಸ್ಎಸ್ಎಲ್​ಸಿ ಪರೀಕ್ಷೆಯು ಇದೇ ಮೊದಲ ಬಾರಿಗೆ ಆರು ದಿನದ ಬದಲಿಗೆ ಎರಡು ದಿನ ನಡೆಯುತ್ತಿದೆ. ಈಗಾಗಲೇ ಮೊದಲ ದಿನದ ಕೋರ್ ವಿಷಯಗಳ ಪರೀಕ್ಷೆಯು ಯಶಸ್ವಿಯಾಗಿದ್ದು, ನಾಳೆ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ.‌

ಭಾಷಾ ವಿಷಯಗಳು- ಪೇಪರ್ 2 ನಾಳೆ ನಡೆಯಲಿದೆ. 22-7-2021 ರಂದು ಬೆಳಗ್ಗೆ: 10-30 ರಿಂದ 1-30ರವರೆಗೆ ಪರೀಕ್ಷೆ ನಡೆಯಲಿದೆ.ರಾಜ್ಯಾದ್ಯಂತ ನಾಳೆ 4,885 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರಥಮ ಭಾಷೆಯಲ್ಲಿ 8,19,694 ವಿದ್ಯಾರ್ಥಿಗಳಲ್ಲಿ ಹೊಸಬರು 7,83,881, ಖಾಸಗಿ ಅಭ್ಯರ್ಥಿಗಳು 21,803 ಹಾಗೂ 14,010 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ದ್ವಿತೀಯ ಭಾಷೆಯನ್ನ 8,27,988 ಇದರಲ್ಲಿ ಹೊಸಬರು 7,83,881, ಖಾಸಗಿ ಅಭ್ಯರ್ಥಿಗಳು 21,803 ಹಾಗೂ 22,304 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಯನ್ನ ಬರೆಯಲಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img