Friday, July 23, 2021
Homeಸುದ್ದಿ ಜಾಲಮಹಿಳೆಯನ್ನ ಟೆರೆಸ್​ನಿಂದ ಕೆಳಗೆಸೆದ ಕಳ್ಳರು

ಇದೀಗ ಬಂದ ಸುದ್ದಿ

ಮಹಿಳೆಯನ್ನ ಟೆರೆಸ್​ನಿಂದ ಕೆಳಗೆಸೆದ ಕಳ್ಳರು

ಆಗ್ರಾ (ಉ.ಪ್ರ): ಮಹಿಳೆಯೊಬ್ಬರಿಂದ ಪರ್ಸ್​​ ಎಗರಿಸಿ ಎಸ್ಕೇಪ್ ಆಗುವ ಭರದಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ಕಳ್ಳರು ಮನೆಯೊಳಗಿದ್ದ ಮಹಿಳೆಯನ್ನ ಛಾವಣಿಯಿಂದ ಕೆಳಗೆ ಎಸೆದಿರುವ ಘಟನೆ ಜಿಲ್ಲೆಯ ಟೆಡಿ ಭಾಗಿಯಾ ಭಾಗದಲ್ಲಿ ನಡೆದಿದೆ. ಟೆರೆಸ್​​ನಿಂದ ಬಿದ್ದ ಮಹಿಳೆಯನ್ನು ಪಲ್ಲವಿ ಶರ್ಮಾ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಂಗಳವಾರ ಮಧ್ಯಾಹ್ನ ಆಟೋದಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಪರ್ಸ್​ ದೋಚಿದ್ದಾರೆ. ತಕ್ಷಣ ಮಹಿಳೆ ಕಿರುಚಾಡಿದ್ದು, ಅಲ್ಲಿದ್ದ ಜನರು ಕಳ್ಳರ ಬೆನ್ನತ್ತಿದ್ದಾರೆ. ಹೀಗಾಗಿ ಕಳ್ಳರು ತಪ್ಪಿಸಿಕೊಳ್ಳುವ ಭರದಲ್ಲಿ ಮನೆಯೊಂದಕ್ಕೆ ನುಗ್ಗಿದ್ದಾರೆ. ಆದರೆ ಇದಕ್ಕೂ ಮೊದಲೇ ಓರ್ವ ಕಳ್ಳನನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ.

ಇತ್ತ ಮನೆಯೊಳಗೆ ನುಗ್ಗಿದ ಕಳ್ಳರು ನೇರವಾಗಿ ಟೆರಸ್​​​ಗೆ ತಲುಪಿದ್ದಾರೆ. ಆದರೆ ಮನೆಯೊಳಗೆ ಮಕ್ಕಳಿಗೆ ಟ್ಯೂಷನ್​ ಮಾಡುತ್ತಿದ್ದ ಪಲ್ಲವಿ ಎಂಬಾಕೆ ಕೈಯಲ್ಲಿ ಹಿಡಿದಿದ್ದ ಕೋಲಿನ ಸಮೇತ ಟೆರೆಸ್​ಗೆ ತಲುಪಿದ್ದಾಳೆ. ಅಲ್ಲೇ ಇದ್ದ ಕಳ್ಳರಿಗೆ ಪರ್ಸ್​ ವಾಪಸ್ ನೀಡುವಂತೆ ಕೇಳಿದ್ದಾಳೆ. ಆದರೆ, ದುಷ್ಕರ್ಮಿಗಳು ಆಕೆಯನ್ನ 15 ಅಡಿ ಎತ್ತರದಿಂದ ಕೆಳಗೆ ಎಸೆದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img