Sunday, August 1, 2021
Homeಸುದ್ದಿ ಜಾಲರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿದ ಕೇರಳ ಸರ್ಕಾರ

ಇದೀಗ ಬಂದ ಸುದ್ದಿ

ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿದ ಕೇರಳ ಸರ್ಕಾರ

ಕೇರಳ: ಸುಪ್ರೀಂ ಕೋರ್ಟ್ ತರಾಟೆಯಿಂದ ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ ರಾಜ್ಯಾದ್ಯಂತ ಜುಲೈ 24 ಹಾಗೂ 25 ರಂದು ಎರಡು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಇಂದು ( ಜುಲೈ 21) ಆದೇಶ ಹೊರಡಿಸಿದೆ.

ಇಂದು ಆದೇಶ ಹೊರಡಿಸಿರುವ ಸರ್ಕಾರ ವಾರಾಂತ್ಯದಲ್ಲಿ ಎರಡು ದಿನ ಕಟ್ಟುನಿಟ್ಟಿನ ಲಾಕ್ ಡೌನ್ ಹೇರುವಂತೆ ಜಿಲ್ಲಾಡಳಿತಗಳಿಗೆ ಆದೇಶ ನೀಡಿದೆ. ಜುಲೈ 12-13 ರಂದು ವಿಧಿಸಲಾಗಿರುವ ಕಠಿಣ ನಿರ್ಬಂಧಗಳು ಜಾರಿಯಲ್ಲಿರಲಿದ್ದು, ಯಾವುದೇ ರೀತಿಯ ಸಡಿಲಿಕೆಗಳು ಇರುವುದಿಲ್ಲ ಎಂದು ತಿಳಿಸಿದೆ.

ಇನ್ನು ಕೋವಿಡ್ 19 ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದ್ದರೂ ಬಕ್ರೀದ್ ಆಚರಣೆಗಾಗಿ ಮೂರು ದಿನಗಳ ಕಾಲ ನಿರ್ಬಂಧಗಳನ್ನು ಸಡಿಲಗೊಳಿಸಿರುವ ಕೇರಳ ಸರಕಾರವನ್ನು ಸುಪ್ರೀಂಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತ್ತು.

ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸುವಂತೆ ವ್ಯಾಪಾರಿಗಳ ಬೇಡಿಕೆಗೆ ಮಣಿದ ರಾಜ್ಯ ಸರಕಾರದ ನಿರ್ಧಾರ ಆಘಾತಕಾರಿ ಎಂದು ಅದು ಹೇಳಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img