Thursday, July 29, 2021
Homeಸುದ್ದಿ ಜಾಲಪೊಲೀಸ್ ಸಿಬ್ಬಂದಿ ಮನೆ ಮೇಲೆ ಉಗ್ರರ ದಾಳಿ

ಇದೀಗ ಬಂದ ಸುದ್ದಿ

ಪೊಲೀಸ್ ಸಿಬ್ಬಂದಿ ಮನೆ ಮೇಲೆ ಉಗ್ರರ ದಾಳಿ

ಶ್ರೀನಗರ (ಜಮ್ಮಿ ಮತ್ತು ಕಾಶ್ಮೀರ): ಪೊಲೀಸ್ ಕಾನ್ಸ್​ಟೇಬಲ್ ಮನೆಗೆ ನುಗ್ಗಿದ ಉಗ್ರರು ಪೊಲೀಸ್ ಸಿಬ್ಬಂದಿ ಪತ್ನಿ ಹಾಗೂ ಮಗಳ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಅನಂತನಾಗ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿನ ವೆರಿನಾಗ್​ನಲ್ಲಿ ಪೊಲೀಸ್ ಕಾನ್ಸ್​ಟೇಬಲ್​​ ಸಾಜ್ಹಾದ್​ ಅಹ್ಮದ್ ಮಲಿಕ್ ಅವರ ಮನೆಗೆ ನುಗ್ಗಿದ್ದ ಉಗ್ರರು ಪತ್ನಿ ನಾಹಿದಾ ಜಾನ್​ ಮತ್ತು ಪುತ್ರಿ ಮದಿಯಾ ಮೇಲೆ ಗುಂಡು ಹಾರಿಸಿದ್ದಾರೆ.

ತಕ್ಷಣವೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೇ ಪೊಲೀಸ್ ಕಾನ್ಸ್​ಟೇಬಲ್​ ಮೇಲೆ ದಾಳಿ ಮಾಡಲು ಮನೆಗೆ ಬಂದಿದ್ದ ಉಗ್ರರು ಕುಟುಂಬಸ್ಥರ ಮೇಲೆ ದಾಳಿ ಮಾಡಿದ್ದಾರೆ. ಉಗ್ರರು ಮನೆಗೆ ನುಗ್ಗಿದ್ದಾಗ ಕಾನ್ಸ್​ಟೇಬಲ್ ಅಹ್ಮದ್ ಮನೆಯಲ್ಲಿರಲಿಲ್ಲ ಎಂದು ತಿಳಿದು ಬಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img