Friday, July 30, 2021
Homeಜಿಲ್ಲೆಬೆಂಗಳೂರುಮುಂಜಾನೆಯಿಂದಲೇ ಸಿಎಂ ನಿವಾಸದಲ್ಲಿ ಸ್ವಾಮೀಜಿಗಳ ದಂಡು

ಇದೀಗ ಬಂದ ಸುದ್ದಿ

ಮುಂಜಾನೆಯಿಂದಲೇ ಸಿಎಂ ನಿವಾಸದಲ್ಲಿ ಸ್ವಾಮೀಜಿಗಳ ದಂಡು

ಬೆಂಗಳೂರು: ನಿನ್ನೆಯಿಂದಲೂ ಮುಖ್ಯಮಂತ್ರಿ ನಿವಾಸ ಕಾವೇರಿಗೆ ಅನೇಕ ಮಠಾಧೀಶರು ಭೇಟಿ ನೀಡಿ ಬಿಎಸ್​ವೈ ಜೊತೆ ಚರ್ಚೆ ನಡೆಸುತ್ತಿದ್ದು ಇಂದು ಕೂಡ ಯಾದಗಿರಿ ಮತ್ತು ಕಲಬುರಗಿಯಿಂದ ಕೆಲ ಮಠಾಧೀಶರು ಆಗಮಿಸಿದ್ದಾರೆ.

ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ಬೆಳಂ ಬೆಳಗ್ಗೆ ಕಾವೇರಿಗೆ ದೌಡಾಯಿಸುತ್ತಿರುವ ಮಠಾಧೀಶರುಗಳು, ಸಿಎಂ ಬಿಎಸ್​ವೈಗೆ ತಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಉಡುಪಿಯ ಪೇಜಾವರ ಶ್ರೀಗಳು, ಡಾ. ಶಿವಮೂರ್ತಿ ಮುರುಘಾ ಶರಣರು, ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಶ್ರೀಗಳು, ಶ್ರೀ ಸಿದ್ಧರಾಮೇಶ್ವರ ಸ್ವಾಮಿಗಳು, ಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿಗಳು ಸೇರಿದಂತೆ ಅನೇಕ ಮಠಾಧೀಶರು ಮುಖ್ಯಮಂತ್ರಿ ಬದಲಾವಣೆಗೆ ಇದು ಸೂಕ್ತ ಕಾಲವಲ್ಲ ಎಂದು ಬಿ.ಎಸ್ ಯಡಿಯೂರಪ್ಪಗೆ ಬೆಂಬಲ ಸೂಚಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img